Select Your Language

Notifications

webdunia
webdunia
webdunia
webdunia

2014ರ ವಿಶ್ವಕಪ್ ಆತಿಥ್ಯಕ್ಕೆ ಬ್ರೆಜಿಲ್ ಸಿದ್ಧವಾಗಿಲ್ಲ: ಪೀಲೆ

2014ರ ವಿಶ್ವಕಪ್ ಆತಿಥ್ಯಕ್ಕೆ ಬ್ರೆಜಿಲ್ ಸಿದ್ಧವಾಗಿಲ್ಲ: ಪೀಲೆ
ಸಾವೋ ಪೌಲೋ , ಶನಿವಾರ, 29 ಅಕ್ಟೋಬರ್ 2011 (15:12 IST)
PTI
ಫುಟ್ಬಾಲ್ ವಿಶ್ವಕಪ್ 2014ರ ಆತಿಥ್ಯಕ್ಕೆ ಬ್ರೆಜಿಲ್ ಸಂಪೂರ್ಣ ಸಿದ್ಧವಾಗಿಲ್ಲ ಎಂದು ಫುಟ್ಬಾಲ್ ದಂತಕತೆಯಾದ ಪೀಲೆ ಹೇಳಿದ್ದಾರೆ.

ಪೀಲೆ ಅವರ ಪ್ರಕಾರ, ಬ್ರೆಜಿಲ್ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವಂತೆ ಸಂವಹನ ಮತ್ತು ವ್ಯವಸ್ಥೆ ಗೊಂದಲಮಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ 2014ರ ನಿಗದಿತ ವೇಳೆಗೆ ಆತಿಥ್ಯಕ್ಕಾಗಿ ಬ್ರೆಜಿಲ್ ಸಂಪೂರ್ಣ ಸಿದ್ಧವಾಗು ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಫುಟ್ಬಾಲ್ ವಿಶ್ವಕಪ್ ಆತಿಥ್ಯಕ್ಕಾಗಿ ಹಗಲಿರಳು ಶ್ರಮಿಸುತ್ತಿರುವ ಬ್ರೆಜಿಲ್ ಅಧ್ಯಕ್ಷರೊಂದಿಗೆ ಸದ್ಯಕ್ಕೆ ನಾನು ಕೂಡಾ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷ ಡಿಲ್ಮಾ ರೌಸೆಫ್, ವಿಶ್ವಕಪ್ 2014ರ ಗೌರವ ರಾಯಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಟ್ಟಡ ನಿರ್ಮಾಣ ಮತ್ತು ಇತರ ಮೂಲಸೌಕರ್ಯಗಳ ನಿರ್ಮಾಣದ ವಿಳಂಬ ನೀತಿಯನ್ನು ಪೀಲೆ ಟೀಕಿಸಿದ್ದಾರೆ.

ಬ್ರಿಜಿಲ್ ಕ್ರೀಡಾ ಸಚಿವ ಒರ್ಲಾಂಡೊ ಸಿಲ್ವಾ ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ್ದಾರೆ. ಕ್ರೀಡಾಪ್ರಾಧಿಕಾರಗಳ ನಾಲ್ಕು ಮಂದಿ ಅಧಿಕಾರಿಗಳು ಕೂಡಾ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ.

ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲಿ ಬಳಸಲಾಗುವ 13 ವಿಮಾನ ನಿಲ್ದಾಣಗಳಲ್ಲಿ 5 ವಿಮಾನ ನಿಲ್ದಾಣಗಳ ನವೀಕರಣ ಕಾರ್ಯಗಳು ಕೂಡಾ ಆರಂಭವಾಗಿಲ್ಲ ಎಂದು ಬ್ರೆಜಿಲ್ ಸರಕಾರ ಇತ್ತೀಚೆಗೆ ವರದಿಯನ್ನು ಬಿಡುಗಡೆ ಮಾಡಿದೆ.

Share this Story:

Follow Webdunia kannada