Select Your Language

Notifications

webdunia
webdunia
webdunia
webdunia

2010ರ ದೆಹಲಿ ಗೇಮ್ಸ್‌ಗೆ ಶರವೇಗಿ ಬೋಲ್ಟ್ ಬರ್ತಾರಂತೆ!

2010ರ ದೆಹಲಿ ಗೇಮ್ಸ್‌ಗೆ ಶರವೇಗಿ ಬೋಲ್ಟ್ ಬರ್ತಾರಂತೆ!
ಪೋರ್ಟ್ ಆಫ್ ಸ್ಪೇನ್ , ಭಾನುವಾರ, 29 ನವೆಂಬರ್ 2009 (15:07 IST)
ಮುಂದಿನ ವರ್ಷ ಭಾರತದ ರಾಜಧಾನಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವಿಶ್ವವಿಖ್ಯಾತ ಓಟಗಾರ ಒಲಿಂಪಿಕ್ ತ್ರಿವಳಿ ಪದಕ ವಿಜೇತ ಉಸೇನ್ ಬೋಲ್ಟ್ ಭಾಗವಹಿಸಲಿದ್ದಾರೆ.

ಇದನ್ನು ಬಹಿರಂಗಪಡಿಸಿರುವುದು 2010ರ ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ.

ಕಾಮನ್‌ವೆಲ್ತ್ ರಾಷ್ಟ್ರಗಳ ಸರಕಾರಗಳ ಮುಖ್ಯಸ್ಥರ ಸಮಾವೇಶದಲ್ಲಿನ ಕ್ರೀಡಾ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡುತ್ತಾ, ಅಕ್ಟೋಬರ್ 3ರಿಂದ 14ರವರೆಗೆ ಭಾರತದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಪ್ರಪ್ರಥಮ ಬಾರಿಗೆ ಬೋಲ್ಟ್ ಪಾಲ್ಗೊಳ್ಳಲಿದ್ದು, ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ತಿಳಿಸಿದರು.

ಗೇಮ್ಸ್ ಆರಂಭವಾಗುವ ಐದು ತಿಂಗಳು ಮೊದಲೇ ಕ್ರೀಡಾಂಗಣಗಳನ್ನು ಹಸ್ತಾಂತರಿಸಲಾಗುತ್ತದೆ. ಇದು ಮುಂದಿನ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ ನಡೆಯಲಿದೆ. ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ. ಗೇಮ್ಸ್ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ ಪರಿಸರ ಹಾನಿಯಾಗದಂತೆ ಅತ್ಯುತ್ತಮವಾಗಿ ಗೇಮ್ಸ್‌ನ್ನು ನಿರ್ವಹಿಸುವ ನಿಲುವಿಗೆ ಈಗಲೂ ಬದ್ಧರಾಗಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದರು.

ಹಾಕಿ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿರುವ ಧ್ಯಾನ್ ಚಂದ್ ಕ್ರೀಡಾಂಗಣವನ್ನು ಸಂಘಟನಾ ಸಮಿತಿಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಹಸ್ತಾಂತರಿಸಲಿದ್ದು, ಇದು ಮೊದಲ ಹಸ್ತಾಂತರಿಸುವ ಮೊದಲ ಕ್ರೀಡಾಂಗಣವೆನಿಸಲಿದೆ.

ಅಕ್ಟೋಬರ್ 3 ಮತ್ತು 14ರಂದು ನಡೆಯುವ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ಜವಾಹರ ಲಾಲ್ ಕ್ರೀಡಾಂಗಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಮೇ ತಿಂಗಳೊಳಗೆ ಹಸ್ತಾಂತರಿಸಲಾಗುತ್ತದೆ.

Share this Story:

Follow Webdunia kannada