Webdunia - Bharat's app for daily news and videos

Install App

ಹಾಫ್‌ಮನ್ ಕಪ್: ಬಿ ಗುಂಪಿನಲ್ಲಿ ಭಾರತ

Webdunia
ಮಂಗಳವಾರ, 30 ಅಕ್ಟೋಬರ್ 2007 (15:38 IST)
ಡಿಸೆಂಬರ್ 29 ರಿಂದ ಪರ್ಥ್‌ನಲ್ಲಿ ನಡೆಯಲಿರುವ ಹಾಫ್‌ಮನ್ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹಣ್ ಬೋಪಣ್ಣ ಅವರನ್ನು ಒಳಗೊಂಡಿರುವ ಭಾರತೀಯ ಟೆನಿಸ್ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಪ್ರಬಲ ತಂಡಗಳಾದ ಆಸ್ಟ್ರೇಲಿಯ ಮತ್ತು ಅಮೆರಿಕ ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಕಳೆದ ಬಾರಿಯ ಹಾಫ್‌ಮನ್ ಕಪ್ ಟೆನಿಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ಸಾನಿಯಾ ಮಿರ್ಜಾ ಮತ್ತು ಬೋಪಣ್ಣ ನೀಡಿದ್ದರಿಂದ ಉಭಯ ಭಾರತೀಯ ಟೆನಿಸ್ ಆಟಗಾರರಿಗೆ ನೇರ ಪ್ರವೇಶದ ಅವಕಾಶ ಕಲ್ಪಿಸಲಾಗಿದ್ದು, ಟೂರ್ನಿಯ ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಮಿರ್ಜಾ- ಬೋಪಣ್ಣ ಜೋಡಿಯು ಏಳನೆ ಶ್ರೇಯಾಂಕವನ್ನು ಪಡೆದಿದೆ.

ಕಳೆದ ಬಾರಿಯ ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಕ್ರೋಯೇಷಿಯಾ ಮತ್ತು ಜೆಕ್ ಗಣರಾಜ್ಯವನ್ನು ಸೋಲಿಸಿದ್ದ ಅವರು, ಸ್ಪೇನ್ ವಿರುದ್ಧ ನಡೆದ ಸೆಮಿಫೈನಲ್ ಹಂತದಲ್ಲಿ ಸೋಲು ಅನುಭವಿಸಿದ್ದರು.
ಬಿ ಗುಂಪಿನಲ್ಲಿ ನಾಲ್ಕನೆ ತಂಡವಾಗಿ ಜೆಕ್ ಗಣರಾಜ್ಯ ಉಳಿದ ತಂಡಗಳೊಂದಿಗೆ ಸೇರಿಕೊಳ್ಳಲಿದೆ.

ಹಾಫ್‌ಮನ್ ಟೆನಿಸ್ ಟೂರ್ನಿ ಭಾರತದ ಟೆನಿಸ್ ಆಟಗಾರರ ಸತ್ವ ಪರೀಕ್ಷೆ ಮಾಡಲಿದೆ ಲೀಗ್ ಹಂತದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಮಾರ್ಡಿ ಫಿಶ್ ಅವರನ್ನು ಎದುರಿಸಬೇಕಾಗಬಹುದು.

" ಎ" ಗುಂಪಿನಲ್ಲಿ ಸೆರ್ಬಿಯಾ, ಫ್ರಾನ್ಸ್, ಅರ್ಜೇಂಟಿನಾ ಮತ್ತು ಏಷ್ಯನ್ ಹಾಫ್‍‌ಮನ್ ಕಪ್ ಟೂರ್ನಿಯಲ್ಲಿ ವಿಜೇತ ತಂಡವನ್ನು ಒಳಗೊಳ್ಳಲಿದೆ. ಮುಂದಿನ ತಿಂಗಳು ಬ್ಯಾಂಕಾಕ್‌ನಲ್ಲಿ ಏಷಿಯನ್ ಹಾಫ್‍ಮನ್‌ ಕಪ್ ಟೂರ್ನಿ ಜರುಗಲಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments