Select Your Language

Notifications

webdunia
webdunia
webdunia
webdunia

ಹಾಫ್‌ಮನ್ ಕಪ್: ಬಿ ಗುಂಪಿನಲ್ಲಿ ಭಾರತ

ಹಾಫ್‌ಮನ್ ಕಪ್: ಬಿ ಗುಂಪಿನಲ್ಲಿ ಭಾರತ
ಪರ್ಥ್ , ಮಂಗಳವಾರ, 30 ಅಕ್ಟೋಬರ್ 2007 (15:38 IST)
ಡಿಸೆಂಬರ್ 29 ರಿಂದ ಪರ್ಥ್‌ನಲ್ಲಿ ನಡೆಯಲಿರುವ ಹಾಫ್‌ಮನ್ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹಣ್ ಬೋಪಣ್ಣ ಅವರನ್ನು ಒಳಗೊಂಡಿರುವ ಭಾರತೀಯ ಟೆನಿಸ್ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಪ್ರಬಲ ತಂಡಗಳಾದ ಆಸ್ಟ್ರೇಲಿಯ ಮತ್ತು ಅಮೆರಿಕ ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಕಳೆದ ಬಾರಿಯ ಹಾಫ್‌ಮನ್ ಕಪ್ ಟೆನಿಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ಸಾನಿಯಾ ಮಿರ್ಜಾ ಮತ್ತು ಬೋಪಣ್ಣ ನೀಡಿದ್ದರಿಂದ ಉಭಯ ಭಾರತೀಯ ಟೆನಿಸ್ ಆಟಗಾರರಿಗೆ ನೇರ ಪ್ರವೇಶದ ಅವಕಾಶ ಕಲ್ಪಿಸಲಾಗಿದ್ದು, ಟೂರ್ನಿಯ ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಮಿರ್ಜಾ- ಬೋಪಣ್ಣ ಜೋಡಿಯು ಏಳನೆ ಶ್ರೇಯಾಂಕವನ್ನು ಪಡೆದಿದೆ.

ಕಳೆದ ಬಾರಿಯ ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಕ್ರೋಯೇಷಿಯಾ ಮತ್ತು ಜೆಕ್ ಗಣರಾಜ್ಯವನ್ನು ಸೋಲಿಸಿದ್ದ ಅವರು, ಸ್ಪೇನ್ ವಿರುದ್ಧ ನಡೆದ ಸೆಮಿಫೈನಲ್ ಹಂತದಲ್ಲಿ ಸೋಲು ಅನುಭವಿಸಿದ್ದರು.
ಬಿ ಗುಂಪಿನಲ್ಲಿ ನಾಲ್ಕನೆ ತಂಡವಾಗಿ ಜೆಕ್ ಗಣರಾಜ್ಯ ಉಳಿದ ತಂಡಗಳೊಂದಿಗೆ ಸೇರಿಕೊಳ್ಳಲಿದೆ.

ಹಾಫ್‌ಮನ್ ಟೆನಿಸ್ ಟೂರ್ನಿ ಭಾರತದ ಟೆನಿಸ್ ಆಟಗಾರರ ಸತ್ವ ಪರೀಕ್ಷೆ ಮಾಡಲಿದೆ ಲೀಗ್ ಹಂತದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಮಾರ್ಡಿ ಫಿಶ್ ಅವರನ್ನು ಎದುರಿಸಬೇಕಾಗಬಹುದು.

"ಎ" ಗುಂಪಿನಲ್ಲಿ ಸೆರ್ಬಿಯಾ, ಫ್ರಾನ್ಸ್, ಅರ್ಜೇಂಟಿನಾ ಮತ್ತು ಏಷ್ಯನ್ ಹಾಫ್‍‌ಮನ್ ಕಪ್ ಟೂರ್ನಿಯಲ್ಲಿ ವಿಜೇತ ತಂಡವನ್ನು ಒಳಗೊಳ್ಳಲಿದೆ. ಮುಂದಿನ ತಿಂಗಳು ಬ್ಯಾಂಕಾಕ್‌ನಲ್ಲಿ ಏಷಿಯನ್ ಹಾಫ್‍ಮನ್‌ ಕಪ್ ಟೂರ್ನಿ ಜರುಗಲಿದೆ.

Share this Story:

Follow Webdunia kannada