Select Your Language

Notifications

webdunia
webdunia
webdunia
webdunia

ಸ್ಕ್ವಾಶ್‌‌: ವೆಸ್ಟರ್ನ್ ಇಂಡಿಯಾ ಓಪನ್‌ಲ್ಲಿ ಮಹೇಶ್‌ಗೆ ಗೆಲುವು

ಸ್ಕ್ವಾಶ್‌‌: ವೆಸ್ಟರ್ನ್ ಇಂಡಿಯಾ ಓಪನ್‌ಲ್ಲಿ ಮಹೇಶ್‌ಗೆ ಗೆಲುವು
ಮುಂಬೈ , ಮಂಗಳವಾರ, 19 ನವೆಂಬರ್ 2013 (19:34 IST)
PR
ವೆಸ್ಟರ್ನ್ ಇಂಡಿಯಾ ಓಪನ್‌ ಸ್ಕ್ವಾಶ್ ಪಂದ್ಯದಲ್ಲಿ, ಹಾಲಿ ಚಾಂಪಿಯನ್‌ ಮತ್ತು ಅಗ್ರ ಶ್ರೇಯಾಂಕಿತ ಮಹಾರಾಷ್ಟ್ರದ ಮಹೇಶ ಮನಗಾಂವಕರ್‌ ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರೂ ನಂತರ ತಮಿಳನಾಡುವಿನ ಕುಶ ಕುಮಾರ ವಿರುದ್ದ ಗೆಲುವನ್ನು ಸಾಧಿಸಿದ್ದಾರೆ.

ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ( ಸಿಸಿಐ) ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲ ಎರಡು ಗೆಮ್‌ನಲ್ಲಿ 7-11, 7-11 ಅಂತರದಿಂದ ಮಹೇಶ ಮನಗಾಂವಕರ್‌. ಸೋತರೂ ಕೂಡ ನಂತರದ ಮೂರು ಗೇಮ್‌ನಲ್ಲಿ 11-3, 11-1, 11-6 ಅಂತರದಿಂದ ಗೆಲುವನ್ನು ಸಾಧಿಸಿ,ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಕುಶ ಕುಮಾರ್ ಅಂಡರ್‌ 19 ಪಂದ್ಯದಲ್ಲಿ ಅಗ್ರ ಶ್ರೇಣಿಯ ತಮಿಳುನಾಡಿನ ದೀಪಕ್ ಮಿರ್ಶಾರನ್ನು ಸೋಲಿಸಿ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ .

ಮಹಿಳಾ ವಿಭಾಗದಲ್ಲಿ ಮಹಾರಾಷ್ಟ್ರದ ಉರ್ವಶಿ ಜೋಶಿ, ವಿಶ್ರುತಿ ಸಾಹನಿರನ್ನು 11-3, 11-2, 11-3 ಅಂತರದಿಂದ ಸೋಲುಸಿ, ಮಹಿಳಾ ವಿಭಾಗದ ಚಾಂಪಿಯನ್‌ ಪ್ರಶಸ್ತಿ ಪಡೆದಿದ್ದಾರೆ.

Share this Story:

Follow Webdunia kannada