Select Your Language

Notifications

webdunia
webdunia
webdunia
webdunia

ಸೋಮ್‌ ಜೋಡಿ ಮಣಿಸಿದ ಇಂಡಿಯನ್ ಎಕ್ಸ್‌ಪ್ರೆಸ್ 8ರ ಘಟ್ಟಕ್ಕೆ ಲಗ್ಗೆ

ಸೋಮ್‌ ಜೋಡಿ ಮಣಿಸಿದ ಇಂಡಿಯನ್ ಎಕ್ಸ್‌ಪ್ರೆಸ್ 8ರ ಘಟ್ಟಕ್ಕೆ ಲಗ್ಗೆ
ನ್ಯೂಯಾರ್ಕ್ , ಮಂಗಳವಾರ, 6 ಸೆಪ್ಟಂಬರ್ 2011 (11:32 IST)
ಅತ್ಯಂತ ರೋಚಕ ಹಣಾಹಣಿಯಲ್ಲಿ ಭಾರತದವರೇ ಆದ ಸೋಮದೇವ್ ದೇವರ್ಮನ್ ಹಾಗೂ ಪಿಲಿಫೈನ್ಸ್‌ನ ಟ್ರೀಟ್ ಕಾನ್‌ರಾಡ್ ಜೋಡಿಯನ್ನು ಮಣಿಸಿರುವ 'ಇಂಡಿಯನ್ ಎಕ್ಸ್‌ಪ್ರೆಸ್' ಖ್ಯಾತಿಯ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಜೋಡಿ ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


ತಮ್ಮ ಆಗಾಧ ಅನುಭವದ ಸಂಪೂರ್ಣ ಲಾಭ ಪಡೆದ ಪೇಸ್-ಭೂಪತಿ ಜೋಡಿ ಪ್ರಿ-ಕ್ವಾರ್ಟರ್ ಪಂದ್ಯವನ್ನು 6-4, 7-5ರ ಅಂತರದಲ್ಲಿ ವಶಪಡಿಸಿಕೊಂಡಿತು. ಒಂದು ವರೆ ತಾಸು ತನಕ ಸಾಗಿದ ಈ ಪಂದ್ಯದಲ್ಲಿ ಎದುರಾಳಿಗೆ ಯಾವುದೇ ಸೆಟ್ ಬಿಟ್ಟುಕೊಡದ ಪೇಸ್-ಭೂಪತಿ ಜೋಡಿ ತಮ್ಮ ಚಾಣಕ್ಯತೆಯನ್ನು ಮೆರೆಯಿತು.

ನಾಲ್ಕನೇ ಶ್ರೇಯಾಂಕ ಹೊಂದಿರುವ ಪೇಸ್-ಭೂಪತಿ ಇದೀಗ ಕ್ವಾರ್ಟರ್ ಫೈನಲ್‌ನಲ್ಲಿ ಆರನೇ ಶ್ರೇಯಾಂಕಿತರಾಗಿರುವ ಪೊಲೆಂಡ್‌ನ ಮರೈಸ್ ಫ್ರೈಸ್ಟೆನ್‌ಬರ್ಗ್ ಹಾಗೂ ಮಾರ್ಸಿನ್ ಮಾಟ್‌ಕೊವ್ಸ್ಕಿ ಜೋಡಿ ಸವಾಲನ್ನು ಎದುರಿಸಲಿದೆ.

ಟೂರ್ನಮೆಂಟ್‌ನಲ್ಲಿ ಭಾರತದ ಮತ್ತೊಂದು ಆಶಾಕಿರಣವಾಗಿರುವ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಹಾಶೀಮ್ ಉಲ್ ಹಕ್ ಖುರೇಷಿ ಸಹ ಎಂಟರ ಹಂತಕ್ಕೆ ಲಗ್ಗೆಯಿಟ್ಟಿದ್ದು, ಸೆಮಿಗಾಗಿನ ಹೋರಾಟದಲ್ಲಿ ಬ್ರಿಟನ್‌ನ ಶ್ರೇಯಾಂಕ ರಹಿತ ಜೋಡಿ ಕಾಲಿನ್ ಪ್ಲೆಮಿಂಗ್ ಹಾಗೂ ರೊಸ್ ಹಚ್ಚಿನ್ಸ್ ಸವಾಲನ್ನು ಎದುರಿಸಲಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada