Select Your Language

Notifications

webdunia
webdunia
webdunia
webdunia

ಸೈನಾಗೆ ಶನಿವಾರವೇ ಪಾಸ್‌ಪೋರ್ಟ್

ಸೈನಾಗೆ ಶನಿವಾರವೇ ಪಾಸ್‌ಪೋರ್ಟ್
ನವದೆಹಲಿ , ಶನಿವಾರ, 13 ಡಿಸೆಂಬರ್ 2008 (13:46 IST)
ಪಾಸ್‌ಪೋರ್ಟ್ ವಿವಾದ ತಾರಕಕ್ಕೇರಿದ ಪರಿಣಾಮ ದೆಹಲಿಯ ಪಾಸ್‌ಪೋರ್ಟ್ ಮುಖ್ಯ ಅಧಿಕಾರಿ ಆರ್. ಸ್ವಾಮಿನಾಥನ್ ಸ್ಪಷ್ಟನೆ ನೀಡಿದ್ದು, ಶನಿವಾರ ಸೈನಾ ನೆಹ್ವಾಲ್ ಅವರಿಗೆ ಪಾಸ್‌ಪೋರ್ಟ್ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.

ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯಲ್ಲಿನ ಅಧಿಕಾರಿಗಳ ದೌರ್ಜನ್ಯದ ಬಗ್ಗೆ ತಿಳಿದ ನಂತರ ಸ್ವಾಮಿನಾಥನ್ ಈ ಭರವಸೆಯನ್ನು ಸೈನಾ ನೆಹ್ವಾಲ್ ಅವರಿಗೆ ನೀಡಿದ್ದಾರೆ. ಸೈನಾ ಡಿಸೆಂಬರ್ 18ರಿಂದ ಮಲೇಷ್ಯಾದಲ್ಲಿ ಬಿಡಬ್ಲ್ಯೂ‌ಎಫ್ ವಿಶ್ವ ಸೂಪರ್ ಸಿರೀಸ್ ಮಾಸ್ಟರ್ಸ್ ಫೈನಲ್ ಆಡಬೇಕಿದ್ದು, ಪಾಸ್‌ಪೋರ್ಟ್ ನವೀಕರಿಸಲು ತಕ್ಷಣಕ್ಕೆ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಪ್ರತಿಕ್ರಿಯೆ ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯಿಂದ ಬಂದ ನಂತರ ಈ ಬೆಳವಣಿಗೆ ಕಂಡುಬಂದಿದೆ.

"ನನ್ನನ್ನು ತೀರಾ ಕೆಟ್ಟದಾಗಿ ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯಲ್ಲಿ ನಡೆಸಿಕೊಳ್ಳಲಾಯಿತು. ಕ್ರೀಡಾಳುಗಳನ್ನು ನೋಡಬೇಕಾದ ರೀತಿ ಇದಲ್ಲ. ನನಗೆ ಇದರಿಂದ ತುಂಬಾ ನೋವಾಗಿದೆ. ಇದು ಕ್ರಿಕೆಟ್ ಆಟಗಾರರು ಅಥವಾ ಸಿನಿಮಾ ನಟರಿಗೆ ಅನ್ವಯಿಸುವುದಿಲ್ಲ. ಹಾಗಾದರೆ ನನ್ನನ್ನು ಯಾಕೆ ಈ ರೀತಿ ನಡೆಸಿಕೊಳ್ಳುತ್ತಾರೆ. ಈ ಟೂರ್ನಮೆಂಟ್ ನನಗೆ ಬಹುಮುಖ್ಯವಾಗಿದೆ" ಎಂದು ಸೈನಾ ನೆಹ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

Share this Story:

Follow Webdunia kannada