Select Your Language

Notifications

webdunia
webdunia
webdunia
webdunia

ಶ್ರೇಯಾಂಕ ಪಟ್ಟಿ :ಅರ್ಜೈಂಟಿನಾಗೆ ಪ್ರಥಮ ಸ್ಥಾನ

ಶ್ರೇಯಾಂಕ ಪಟ್ಟಿ :ಅರ್ಜೈಂಟಿನಾಗೆ ಪ್ರಥಮ ಸ್ಥಾನ
ಲಂಡನ್ (ಏಜೆನ್ಸಿ) , ಗುರುವಾರ, 25 ಅಕ್ಟೋಬರ್ 2007 (15:30 IST)
ವಿಶ್ವ ಪುಟ್‌ಬಾಲ್ ಮಂಡಳಿ ಪಿಪಾ ಮಾಸಿಕ ರಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಅರ್ಜೆಂಟೀನಾ ತನ್ನ ಅಗ್ರ ಸ್ಥಾನಕ್ಕೆ ವಾಪಸಾಗಿದ್ದರೆ, ಕಳೆದ ಬಾರಿಯ ನಂಬರ್ 1 ಇಟಲಿ 3ನೇ ಸ್ಥಾನಕ್ಕೆ ಜಾರಿದೆ ಮತ್ತು ಬ್ರೆಸಿಲ್ 2ನೇ ಸ್ಥಾನದಲ್ಲಿ ಮುಂದುವರಿದಿದೆ.

ಈ ಪಟ್ಟಿಯಲ್ಲಿ ಭಾರತ ಈ ಮುಂಚಿನ ಸ್ಥಾನದಲ್ಲೇ ಉಳಿದು ಕೊಂಡಿದ್ದು, ಅಂಟಿಗುವಾ ಮತ್ತು ಬರ್ಬುಡಾ ಜತೆ ಜಂಟಿಯಾಗಿ 145ನೇ ಸ್ಥಾನದಲ್ಲಿ ಮುಂದುವರಿದಿದೆ.

ಅರ್ಜೆಂಟೀನಾ ಇತ್ತೀಚೆಗೆ ನಡೆದ 2010 ವಿಶ್ವ ಕಪ್‌ಗಾಗಿನ ಅರ್ಹತಾ ಪಂದ್ಯದಲ್ಲಿ ಚಿಲಿ ಮತ್ತು ವೆನುಜುವೆಲಾ ಎರಡೂ ತಂಡಗಳ ವಿರುದ್ದ 2-0ರ ಗೆಲುವು ಸಾಧಿಸಿದ್ದರಿಂದ ತನ್ನ ಸ್ಥಾನದಲ್ಲಿ ಬಡ್ತಿ ಪಡೆಯಿತು.

ಯುರೋ 2008 ಅರ್ಹತಾ ಪಂದ್ಯದ ಫಲಿತಾಂಶದಿಂದ ಪ್ರಾನ್ಸ್ 2 ಸ್ಥಾನಗಳೊಂದಿಗೆ 4ನೇ ಸ್ಥಾನಕ್ಕೆ ಜಿಗಿತ ಕಂಡಿತು. ಜರ್ಮನಿ ಒಂದು ಸ್ಥಾನದೊಂದಿಗೆ 5ನೇ ಸ್ಥಾನಕ್ಕೆ ಜಾರಿತು. ಸ್ಪೈನ್ 6ನೇ ಸ್ಥಾನಕ್ಕೆ ಬಡ್ತಿ ಪಡೆದರೆ, ನೆದರ್ಲೇಂಡ್ 7ನೇ ಸ್ಥಾನಕ್ಕೆ ಕುಸಿಯಿತು.

ಜರ್ಮನಿ ವಿರುದ್ದದ 3-0ದ ಗೆಲುವಿನ ನಂತರ ಜೆಕ್ ಗಣರಾಜ್ಯ ಅಗ್ರ 10ರ ಸ್ಥಾನಕ್ಕೆ ಮರಳಿತು. ಆದರೆ ಇಂಗ್ಲೆಂಡ್ 2 ಸ್ಥಾನಗಳೊಂದಿಗೆ 11ನೇ ಸ್ಥಾನಕ್ಕೆ ಕುಸಿಯಿತು.

Share this Story:

Follow Webdunia kannada