Select Your Language

Notifications

webdunia
webdunia
webdunia
webdunia

ಶೂಟಿಂಗ್ ಶ್ರೇಯಾಂಕ: ರೋಂಜನ್ ಸೋಧಿಗೆ ಎರಡನೇ ಸ್ಥಾನ

ಶೂಟಿಂಗ್ ಶ್ರೇಯಾಂಕ: ರೋಂಜನ್ ಸೋಧಿಗೆ ಎರಡನೇ ಸ್ಥಾನ
ನವದೆಹಲಿ , ಸೋಮವಾರ, 31 ಅಕ್ಟೋಬರ್ 2011 (16:39 IST)
ಕಳೆದ ತಿಂಗಳು ನಡೆದ ಅಲ್ ಐನ್ ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ರೋಂಜನ್ ಸೋಧಿ ಯಶಸ್ವಿಯಾಗಿ ಪ್ರಶಸ್ತಿ ಉಳಿಸಿಕೊಂಡಿದ್ದರಿಂದ ವಿಶ್ವ ಶೂಟಿಂಗ್ ಡಬಲ್ ಟ್ರಾಪ್ ಶ್ರೇಯಾಂಕದಲ್ಲಿ ಆರು ಸ್ಥಾನಗಳ ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಂತರ 8ನೇ ಸ್ಥಾನಕ್ಕೆ ಕುಸಿತ ಕಂಡಿದ್ದ ಸೋಧಿ, ಡಬಲ್ ಟ್ರಾಪ್ ಅಂತಿಮ ಸ್ಪರ್ಧೆಯಲ್ಲಿ ಚೀನಾದ ಎದುರಾಳಿ ಹು ಬಿನ್‌ಯಾವುನ್ ವಿರುದ್ಧ ಜಯಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

ವಿಶ್ವ ಬಾಕ್ಸಿಂಗ್ ಶ್ರೇಯಾಂಕದಲ್ಲಿ ಭಾರಿ ಚೇತರಿಕೆ ಕಂಡ ಸೋದಿಗೆ ಪ್ರಸಕ್ತ ವರ್ಷ ಉತ್ತಮ ಫಲಿತಾಂಶ ನೀಡಿದೆ. ಕಳೆದ ವರ್ಷ ಚೀನಾದ ಗುವಾಂಗ್‌ಝೌ ನಗರದಲ್ಲಿ ನಡೆದ ಶೂಟಿಂಗ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

ರೋಂಜನ್ ಸೋಧಿ, ಬೀಜಿಂಗ್ ಮತ್ತು ಮಾರಿಬೊರ್ ಹಾಗೂ ಡಬಲ್ ಟ್ರಾಪ್ ವಿಭಾಗದಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ವಿಶ್ವಕಪ್ ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಯಶಸ್ವಿನ ಮೆಟ್ಟಿಲೆರುತ್ತಿರುವುದರಿಂದ ಎಫ್‌ಐಸಿಸಿಐ ಕ್ರೀಡಾ ವ್ಯಕ್ತಿ ಪ್ರಶಸ್ತಿಗೆ ಸೋಧಿ ಭಾಜನರಾಗಿದ್ದಾರೆ.

ವಿಶ್ವ ಬಾಕ್ಸಿಂಗ್ ಟಾಪ್-3 ಶ್ರೇಯಾಂಕಕ್ಕೆ ಮರಳಿರುವುದು ಸಂತಸ ತಂದಿದೆ. ಡಬಲ್ ಟ್ರಾಪ್ ಶೂಟಿಂಗ್ ಸ್ಪರ್ಧೆ ತುಂಬಾ ಕಠಿಣವಾಗಿದೆ. ಆದರೆ, ಡಬಲ್ ಟ್ರಾಪ್‌ನಲ್ಲಿ ಚಿನ್ನದ ಪದಕ ಪಡೆದಿರುವುದು ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಸೋಧಿ ತಿಳಿಸಿದ್ದಾರೆ.

Share this Story:

Follow Webdunia kannada