Webdunia - Bharat's app for daily news and videos

Install App

ವಿಶ್ವ ಚೆಸ್ ಚಾಂಪಿಯನ್ ಗೆದ್ದ ವಿಶ್ವದ ಎರಡನೇ ಅತಿ ಕಿರಿಯ ಆಟಗಾರ

Webdunia
ಮಂಗಳವಾರ, 26 ನವೆಂಬರ್ 2013 (13:48 IST)
PTI
ವಿಶ್ವ ಚೆಸ್ ಚಾಂಪಿಯನ್ ಗೆದ್ದ ವಿಶ್ವದ ಎರಡನೇ ಅತಿ ಕಿರಿಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಟ್ರೋಫಿಯೊಂದಿಗೆ ಸಂಭ್ರಮಿಸಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ ಚೆನ್ನೈನಲ್ಲಿ ಕಾರ್ಲ್‌ಸನ್ ಅವರಿಗೆ ಗೋಲ್ಡ್ ಕಪ್ ಮತ್ತು 9.9 ಕೋಟಿ ರೂಪಾಯಿ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಇದೇ ವೇಳೆ ಅವರು, ಅಲೀವ್ ಎಲೆಗಳಿಂದ ಮಾಡಿದ ಗಾರ್ಲೆಂಡ್ ಅನ್ನೂ ನಾರ್ವೆ ಆಟಗಾರನಿಗೆ ನೀಡಿ ಗೌರವಿಸಿದರು.

ಇದರ ಹೊರತಾಗಿ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದ ಭಾರತದ ವಿಶ್ವನಾಥನ್ ಅವರಿಗೂ 6.03 ಕೋಟಿ ರೂಪಾಯಿ ಚೆಕ್ ವಿತರಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಫೀಡೆ ಅಧ್ಯಕ್ಷ ಕಿರ್ಸನ್ ಇಲಿಯುಮ್‌ಜಿನೊ ಅವರು ಕಾರ್ಲ್‌ಸನ್ ಮತ್ತು ಆನಂದ್ ಕೊರಳಿಗೆ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳ ಹಾರ ಹಾಕಿ ಅಭಿನಂದಿಸಿದರು.

ಚೆನ್ನೈನಲ್ಲಿಯೇ ನಡೆದ ಒಟ್ಟು 12 ಪಂದ್ಯಗಳ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಪೈಪೋಟಿಯಲ್ಲಿ 22ರ ಮ್ಯಾಗ್ನಸ್ ಕಾರ್ಲ್‌ಸನ್ ಅವರು 10 ಪಂದ್ಯಗಳಲ್ಲಿಯೇ 6.5-3.5 ಅಂಕಗಳ ಅಂತರದಲ್ಲಿ ಸ್ಥಳೀಯ ಆಟಗಾರ 43ರ ಆನಂದ್‌ಗೆ ಸೋಲುಣಿಸಿ ಪ್ರಶಸ್ತಿಗೆ ಭಾಜನರಾಗಿದ್ದರು. ಐದು ಬಾರಿಯ ಹಾಗೂ ಹಾಲಿ ಚಾಂಪಿಯನ್ ಆನಂದ್ ಅವರು, ಈ ಬಾರಿ ಒಂದೂ ಪಂದ್ಯ ಗೆದ್ದುಕೊಳ್ಳಲಾಗದೇ ಇನ್ನೂ ಎರಡು ಪಂದ್ಯಗಳು ಉಳಿದಿರುವಂತೆ ಸೋಲನುಭವಿಸಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments