Webdunia - Bharat's app for daily news and videos

Install App

ವಿಶ್ವಕಪ್‌ಗಾಗಿ ಭಾರತದ ಭದ್ರತೆ ಪರಿಶೀಲಿಸಲಿರುವ ಪಾಕಿಸ್ತಾನ!

Webdunia
ಶುಕ್ರವಾರ, 27 ನವೆಂಬರ್ 2009 (17:54 IST)
ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಪೇಕ್ಷಣಾ ಪತ್ರ ನೀಡುವ ಮೊದಲು ಪಾಕಿಸ್ತಾನ ಸರಕಾರವು ದೆಹಲಿಯಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲಿದೆ.

ಫೆಬ್ರವರಿ 28ರಿಂದ ಮಾರ್ಚ್ 13ರವರೆಗೆ 12 ರಾಷ್ಟ್ರಗಳ ನಡುವಿನ ಮಹಾ ಕ್ರೀಡಾಕೂಟದ ಭದ್ರತಾ ವ್ಯವಸ್ಥೆಗಳನ್ನು ಪಾಕಿಸ್ತಾನದ ತಜ್ಞರು ವಿಮರ್ಶೆ ನಡೆಸಿದ ನಂತರವಷ್ಟೇ ರಾಷ್ಟ್ರೀಯ ತಂಡವನ್ನು ಗಡಿಯಾಚೆ ಕಳುಹಿಸುವ ಅಥವಾ ಕಳುಹಿಸದೇ ಇರುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ಶುಕ್ರವಾರ ಹೇಳಿವೆ.

ಬಲ್ಲ ಮೂಲಗಳ ಪ್ರಕಾರ ಪಾಕಿಸ್ತಾನ-ಭಾರತದ ನಡುವಿನ ಉದ್ವಿಗ್ನ ಪರಿಸ್ಥಿತಿ ಸಮಸ್ಯೆಯಾಗಿಯೇ ಮುಂದುವರಿಯುತ್ತಿದ್ದು, ಇದು ಭಾರತ ಪ್ರವಾಸದ ವೇಲೆ ಪಾಕ್ ಆಟಗಾರರ ಭದ್ರತಾ ಸಮಸ್ಯೆಗೆ ಕಾರಣವಾಗಬಹುದು ಎನ್ನಲಾಗಿದೆ.

ಈ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಕಾರ್ಯದರ್ಶಿ ಆಸಿಫ್ ಬಾಜ್ವಾರನ್ನು ಸಂಪರ್ಕಿಸಿ ಪ್ರಶ್ನಿಸಿದಾಗ, ನಾವು ಮುಂದಿನ ತಿಂಗಳು ಸರಕಾರದ ಅನುಮತಿಗಾಗಿ ಮನವಿಯನ್ನು ಸಲ್ಲಿಸಲಿದ್ದೇವೆ ಎಂದಿದ್ದಾರೆ.

ವಿಶ್ವಕಪ್ ಆರಂಭಕ್ಕಿನ್ನೂ ಹಲವು ಸಮಯವಿದೆ. ನಾವು ಮುಂದಿನ ತಿಂಗಳು ಚಾಂಪಿಯನ್ಸ್ ಚಾಲೆಂಜ್ ಟೂರ್ನಮೆಂಟ್‌ನ ನಂತರ ನಿರಪೇಕ್ಷಣಾ ಪತ್ರಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಯಿಸುವ ಮೂಲಕ ಪಾಕಿಸ್ತಾನ ದೆಹಲಿಯಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಸ್ಥಾನ ಪಡೆದುಕೊಂಡಿತ್ತು.

ಪಾಕ್ ಹಾಕಿ ತಂಡವು ಭಾರತ ಪ್ರವಾಸ ಕೈಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಸರಕಾರದ ತಾತ್ವಿಕ ಒಪ್ಪಿಗೆಯನ್ನಷ್ಟೇ ಪಡೆಯಬೇಕಿದೆ. ಮಹಾ ಕ್ರೀಡಾಕೂಟದಿಂದ ಹೊರಗುಳಿಯುವ ಸಾಧ್ಯತೆ ಕಡಿಮೆ ಎಂದು ಕೆಲ ದಿನಗಳ ಹಿಂದೆ ಪಿಎಚ್ಎಫ್ ಮೂಲವೊಂದು ಹೇಳಿತ್ತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments