ವಿದೇಶದಲ್ಲಿ ಮೊದಲ ಬಾರಿಗೆ ಐಟಿಎಫ್ ಪ್ರಶಸ್ತಿ ಗೆದ್ದ ಯೂಕಿ
ನವದೆಹಲಿ , ಸೋಮವಾರ, 24 ಅಕ್ಟೋಬರ್ 2011 (12:10 IST)
ಕಳೆದ ವಾರವಷ್ಟೆ ರಾಷ್ಟ್ರೀಯ ಚಾಂಪಿಯನ್ನರಾಗಿ ಹೊರಹೊಮ್ಮಿದ್ದ ಯೂಕಿ ಭಾಂಭ್ರಿ, ಇದೀಗ ನೈಜೇರಿಯಾದಲ್ಲಿ ನಡೆದ ಐಟಿಎಫ್ ಫ್ಯೂಚರ್ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ ಐಟಿಎಫ್ ಫ್ಯೂಚರ್ ಸಿಂಗಲ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತಮ್ಮದಕ್ಷಿಣ ಆಫ್ರಿಕಾ ಎದುರಾಳಿ ರುವಾನ್ ರೊಯಿಲೊಫ್ಸೆ ವಿರುದ್ಧ 7-5, 7-5 ಸೆಟ್‌ಗಳ ಅಂತರದಿಂದ ಜಯಗಳಿಸಿದ್ದಾರೆ.ಐದನೇ ಶ್ರೇಯಾಂಕಿತ ಭಾಂಭ್ರಿ, ಸುಮಾರು ಎರಡು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 15,000 ಡಾಲರ್ ಬಹುಮಾನ ಮೊತ್ತದ ಪಂದ್ಯಾವಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.ವಿಶ್ವ ಎಟಿಪಿ ಶ್ರೇಯಾಂಕದಲ್ಲಿ 479ನೇ ಶ್ರೇಯಾಂಕ ಪಡೆದಿರುವ ಭಾಂಭ್ರಿ, ಇದೀಗ, ಪಂದ್ಯಾವಳಿಯ ಗೆಲುವಿನೊಂದಿಗೆ ಟಾಪ್ -400ರಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಎಟಿಪಿ ಮೂಲಗಳು ತಿಳಿಸಿವೆ. 19
ವರ್ಷ ವಯಸ್ಸಿನ ಭಾಂಭ್ರಿ, 2009 ಮತ್ತು 2010ರ ಅವಧಿಯಲ್ಲಿ ಟಾಪ್-350ರಲ್ಲಿ ಸ್ಥಾನ ಪಡೆದಿದ್ದರು. ಆದರೆ, ಗಾಯಗಳಿಂದಾಗಿ ವಿಶ್ರಾಂತಿ ಪಡೆದಿದ್ದರಿಂದ ಶ್ರೇಯಾಂಕದಲ್ಲಿ ಕುಸಿತ ಕಂಡಿತ್ತು.2009
ರಿಂದ ಇಲ್ಲಿಯವರೆಗೆ ಐದು ಐಟಿಎಫ್ ಪ್ರಶಸ್ತಿಗಳನ್ನು ಪಡೆಯುವಲ್ಲಿ ಯೂಕಿ ಭಾಂಭ್ರಿ ಯಶಸ್ವಿಯಾಗಿದ್ದಾರೆ.