Select Your Language

Notifications

webdunia
webdunia
webdunia
webdunia

ಮ್ಯಾಚ್‌ ಫಿಕ್ಸಿಂಗ್‌: ಬ್ರಿಟನ್‌ನ ಮೂವರು ಆಟಗಾರರ ಬಂಧನ

ಮ್ಯಾಚ್‌ ಫಿಕ್ಸಿಂಗ್‌: ಬ್ರಿಟನ್‌ನ ಮೂವರು ಆಟಗಾರರ ಬಂಧನ
ಲಂಡನ್‌ , ಶುಕ್ರವಾರ, 29 ನವೆಂಬರ್ 2013 (18:36 IST)
PR
ಇಂಗ್ಲೆಂಡ್‌ನ ಪುಟ್ಬಾಲ್‌ ಪಂದ್ಯದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆ ಎನ್ನುವ ಕಾರಣಕ್ಕೆ ಇಂಗ್ಲೆಂಡ್‌ನ ಪೋಲಿಸರು ಮಾಜಿ ಆಟಗಾರ ಡೆಲರಾಯ್‌ ಫಾಸೆ ಮತ್ತು 3 ಜನ ಆಟಗಾರರ ಸಹಿತ ಒಟ್ಟು 6 ಜನರನ್ನು ಬಂಧಿಸಿದ್ದಾರೆ.

ಎನ್‌ಸಿಎ ಫುಟ್ಬಾಲ್‌ ಪಂದ್ಯದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆ ಎನ್ನುವ ಕಾರಣಕ್ಕೆಒಟ್ಟು ಆರು ಜನರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಅಪರಾಧ ಎಜೆನ್ಸಿಯ ವಕ್ತಾರರೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎನ್‌ಸಿಎ ಆಯೋಗ ಮತ್ತು ಫುಟ್ಬಾಲ್ ಸಂಘ ಜೊತೆಗೂಡಿ ಮ್ಯಾಚ್‌ಫಿಕ್ಸಿಂಗ್‌ ಹಗರಣದ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಸದ್ಯಕ್ಕೆ ತನಿಖೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ.

Share this Story:

Follow Webdunia kannada