Select Your Language

Notifications

webdunia
webdunia
webdunia
webdunia

ಮಿಯಾಮಿ ಟೆನಿಸ್‌ : ಲೀ ನಾಗೆ ಸುಲಭದ ಜಯ

ಮಿಯಾಮಿ ಟೆನಿಸ್‌ : ಲೀ ನಾಗೆ ಸುಲಭದ ಜಯ
ಮಿಯಾಮಿ , ಬುಧವಾರ, 26 ಮಾರ್ಚ್ 2014 (15:53 IST)
PR
ಮಿಯಾಮಿ ಟೆನಿಸ್‌ನಲ್ಲಿ ಸತತ ಎರಡು ಬಾರಿ ಚಾಂಪಿಯನ್‌ ಆದ 5ನೇ ಶ್ರೇಯಾಂಕಿತ ಸ್ವಿಜ್ಡರ್ಲ್ಯಾಂಡ್‌ನ ರೋಜರ್ ಫೆಡರರ್, ಗತ ಚಾಂಪಿಯನ್‌‌‌ ಬ್ರಿಟನ್‌‌ನ ಆಂಡಿ ಮರೆ ಮತ್ತು ಮಹಿಳಾ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತ್ ಚೀನಾದ ಲೀ ನಾ ತಮ್ಮ ತಮ್ಮ ಸಿಂಗಲ್ಸ್‌‌‌ ನಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ಈ ಎರಡು ಸ್ಟಾರ್‌‌‌ ಆಟಗಾರರು ಈ ಗೆಲುವಿನ ಮೂಲಕ ಮಿಯಾಮಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಮೆಂಟ್‌‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಐದನೇ ಶ್ರೇಯಾಂಕಿತ್ ಸ್ವಿಡ್ಜರ್ಲೆಂಡ್‌‌‌ನ ಫೆಡರರ್‌ ಪುರುಷ ಸಿಂಗಲ್ಸ್‌‌‌ನಲ್ಲಿ ಮೂರನೇ ಸುತ್ತಿನಲ್ಲಿ ಹಾಲೆಂಡ್‌‌ನ ಥಿಯೆಮೊ ಡಿ ಬಾಕೆರ್‌ರನ್ನು 6-3, 6-3 ಸೆಟ್‌‌ಗಳ ಅಂತರದಿಂದ ಸೋಲಿಸುವಲ್ಲಿ ಸಫಲರಾಗಿದ್ದಾರೆ.

ಇನ್ನೊಂದು ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಆಂಡಿ ಮುರ್ರೆ 32ನೇ ಶ್ರೇಯಾಂಕಿತ ಸ್ಪೇನ್‌ ದೇಶದ ಫೆಲಿಸಿಯಾನೋ ಲೋಪೆಜ್‌‌ರನ್ನು 6-4, 6-1 ಸೆಟ್‌‌ಗಳ ಅಂತರದಿಂದ ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

Share this Story:

Follow Webdunia kannada