Select Your Language

Notifications

webdunia
webdunia
webdunia
webdunia

ಭಾರತೀಯ ಕುಸ್ತಿ ಪಟುಗಳ ಚಿತ್ತ ಪದಕದತ್ತ...

ಭಾರತೀಯ ಕುಸ್ತಿ ಪಟುಗಳ ಚಿತ್ತ ಪದಕದತ್ತ...
ನವದೆಹಲಿ , ಮಂಗಳವಾರ, 29 ಜುಲೈ 2008 (14:08 IST)
ಬೀಜಿಂಗ್‌‌ನ ಒಲಿಂಪಿಕ್ ಮಹಾನ್ ಗೇಮ್ಸ್‌‌ನಲ್ಲಿ ಭಾರತದ ಕುಸ್ತಿಪಟುಗಳು ಹೆಸರುವಾಸಿಯಾಗಿದ್ದರೂ ಕೂಡ, ಸುಮಾರು 56ವರ್ಷಗಳ ಹಿಂದೆ ಹೆಲ್ಸಿಂಕಿ ಗೇಮ್ಸ್‌ನಲ್ಲಿ ಪ್ರಥಮವಾಗಿ ವೈಯಕ್ತಿಕ ಪ್ರಶಸ್ತಿಯನ್ನು ಗಳಿಸಿಕೊಟ್ಟ ಕುಸ್ತಿ ಕ್ರೀಡೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ನಿರೀಕ್ಷೆ ಹೊಂದಿದೆ.

1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕೆ.ಡಿ. ಯಾದವ್ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಪ್ರಥಮವಾಗಿ ವೈಯಕ್ತಿಕ ಪ್ರಶಸ್ತಿ ಜಯಿಸುವ ಮೂಲಕ ಭಾರತ ಶ್ಲಾಘನೆಗೆ ಭಾಜನವಾಗಿತ್ತು.

ತದನಂತರ ಕುಸ್ತಿ ಕ್ರೀಡೆ ಅನೇಕ ಏಳು-ಬೀಳುಗಳನ್ನು ಕಂಡಿದೆ. ಅಲ್ಲದೇ ಈ ಬಾರಿ ಒಲಿಂಪಿಕ್ಸ್‌ಗೆ ಯೋಗೇಶ್ವರ್ ದತ್ತ್ (60ಕೆಜಿ), ಸುಶೀಲ್ ಕುಮಾರ್ (66 ಕೆಜಿ) ಮತ್ತು ರಾಜೀವ್ ಟೋಮರ್ (120 ಕೆಜಿ)) ಅವರನ್ನು ಕಣಕ್ಕಿಳಿಸಿದ್ದರೂ, ಭಾರತದ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ಹೇಳುವಂತೆ ಇವರಲ್ಲಿ ಯಾರಾದರೊಬ್ಬರು ಯಾದವ್ ಸಾಧನೆಯನ್ನು ಪುನರಾವರ್ತಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

ನಿಜವಾಗಿ ಹೇಳಬೇಕಾದರೆ, ಸೂಪರ್ ಹೆವೀ ವೈಟ್ ವಿಭಾಗ (120 ಕೆಜಿ)ಯಲ್ಲಿ ಸ್ಪರ್ಧಿಸುತ್ತಿರುವ ರಾಜೀವ್ ಟೋಮರ್‌ರಿಂದ ಹೆಚ್ಚಿನ ನಿರೀಕ್ಷೆ ಇಡಲು ಸಾಧ್ಯವಿಲ್ಲ. ಈ ವಿಭಾಗದಲ್ಲಿ ಅನೇಕ ಅಗ್ರ ಕುಸ್ತಿಪಟುಗಳು ಪಾಲ್ಗೊಳ್ಳುತ್ತಿದ್ದಾರೆ.

ಆದರೆ ಸುಶೀಲ್ ಮತ್ತು ಯೋಗೇಶ್ವರ್ ತಮ್ಮ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಇದೆ. ಬೀಜಿಂಗ್‌ನಲ್ಲಿ ತಮ್ಮ ವಿಭಾಗದಲ್ಲಿ ಸ್ಪರ್ಧಿಸಲಿರುವ 50ಶೇ. ಕುಸ್ತಿಪಟುಗಳನ್ನು ಈ ಇಬ್ಬರು ಸೋಲಿಸಿದ್ದಾರೆ ಎಂದು ಡಬ್ಲ್ಯುಎಫ್ಐ ಅಧ್ಯಕ್ಷ ಮಾಂಧೇರ್ ತಿಳಿಸಿದ್ದಾರೆ.

ಸುಶೀಲ್ ಮತ್ತು ಯೋಗೇಶ್ವರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಒಲಿಂಪಿಕ್ಸ್ ಮುನ್ನ ಆಡಲಾದ ಸ್ಪರ್ಧೆಗಳಲ್ಲಿ ಈ ಭಾರತೀಯ ಆಟಗಾರರು ಬೀಜಿಂಗ್‌ಗೆ ಬರಲಿರುವ ಹಲವು ಕುಸ್ತಿಪಟುಗಳನ್ನು ಸೋಲಿಸಿದ್ದಾರೆ ಎಂದು ಹೇಳಿರುವ ರಾಷ್ಟ್ರೀಯ ಕೋಚ್ ಸೋಂಧಿ, ಪದಕ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada