Webdunia - Bharat's app for daily news and videos

Install App

ಭಾರತದ ಕೈತಪ್ಪಲಿರುವ 2010ರ ಕಾಮನ್‌ವೆಲ್ತ್?

Webdunia
ಶುಕ್ರವಾರ, 14 ನವೆಂಬರ್ 2008 (16:34 IST)
ಭಾರತಕ್ಕೆ ಸಿಕ್ಕ ಕಾಮನ್‌ವೆಲ್ತ್ ಗೇಮ್ಸ್ 2010ರ ಆಯೋಜನೆಯ ಅವಕಾಶ ತಪ್ಪಿ ಹೋಗುವ ಸಾಧ್ಯತೆಯಿದೆಯೆಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿ ನಿರ್ಮಾಣವಾಗಬೇಕಿರುವ ಕ್ರೀಡಾ ಗ್ರಾಮ ವಿವಾದಕ್ಕೀಡಾಗಿದ್ದು ಈ ಹಿನ್ನಲೆಯಲ್ಲಿ ಇಂತಹ ಹೇಳಿಕೆಗಳು ಹೊರಬಿದ್ದಿವೆ.

2010 ರ ಅಕ್ಟೋಬರ್ ಮ‌ೂರರಿಂದ 14ರವರೆಗೆ ನಡೆಯಬೇಕಿರುವ ಕಾಮನ್‌ವೆಲ್ತ್ ಗೇಮ್ಸ್‌‌ಗಾಗಿ ಹಲವು ದೇಶಗಳಿಂದ 71 ತಂಡಗಳು ಆಗಮಿಸಲಿದ್ದು, ಅದಕ್ಕಾಗಿ ಕ್ರೀಡಾ ಗ್ರಾಮ ನಿರ್ಮಾಣವಾಗಬೇಕಿತ್ತು. ಆದರೆ ಪರಿಸರವಾದಿಗಳಿಂದ ಎದುರಿಸುತ್ತಿರುವ ತೀವ್ರ ಪ್ರತಿಭಟನೆ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಯಮುನಾ ನದಿ ತೀರದಲ್ಲಿ ಕಟ್ಟಬೇಕಿದ್ದ ಕ್ರೀಡಾ ಗ್ರಾಮದಲ್ಲಿ ಸುಮಾರು 8,500 ತಾತ್ಕಾಲಿಕ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಇದೀಗ ದೆಹಲಿ ಉಚ್ಚ ನ್ಯಾಯಾಲಯ ಇದರ ಬಗ್ಗೆ ಪರಿಸರ ತಜ್ಞರ ಅಭಿಪ್ರಾಯ ಕೇಳಿದ್ದು, ಒಂದು ವೇಳೆ ಹಾನಿಕಾರಕ ಎಂಬ ವರದಿಗಳನ್ನು ಅವರು ಕೊಟ್ಟಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ರದ್ದಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆಗಳು ಅಷ್ಟಕ್ಕೇ ಸೀಮಿತವಾಗಿಲ್ಲ. ಗೇಮ್ಸ್ ಆರಂಭವಾಗಲು ಇನ್ನು ಕೇವಲ ಎರಡೇ ವರ್ಷ ಅಂತರವಿರುವಾಗ ಸಿದ್ಧತೆಗಳು ಆರಂಭಿಕ ಹಂತದಲ್ಲೇ ಇವೆ. ವೆಲೋಡ್ರೋಮ್ ನಿರ್ಮಾಣ ಇನ್ನೂ ಶುರು ಮಾಡಿಲ್ಲ. ಮ‌ೂಲಸೌಕರ್ಯಗಳು ಪ್ರಾಥಮಿಕ ಹಂತದಲ್ಲೇ ಬಾಕಿ ಉಳಿದಿವೆ. ಇದರ ಜತೆಗೆ ಪರಿಸರ ಮಾಲಿನ್ಯ ಬೆದರಿಕೆಯನ್ನೂ ಕ್ರೀಡಾಕೂಟ ಎದುರಿಸುತ್ತಿದೆ. ಹಾಗಾಗಿ ಕಾಮನ್‌ವೆಲ್ತ್ ಗೇಮ್ಸ್‌ ಭಾರತದಲ್ಲಿ ನಡೆಯುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂಬುದು ಗೇಮ್ಸ್ ಅಧಿಕಾರಿಗಳ ಅಭಿಪ್ರಾಯ.

ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಅಂತ್ಯಗೊಂಡರೆ ಮಾತ್ರ ಕಾಮನ್‌ವೆಲ್ತ್ ಗೇಮ್ಸ್‌ ಭಾರತದಲ್ಲಿ ನಡೆಯಬಹುದು. ಒಂದು ವೇಳೆ ಗೇಮ್ಸ್ ಪ್ರಾಯೋಜಕತ್ವ ಭಾರತದ ಕೈತಪ್ಪಿದಲ್ಲಿ ಅದಕ್ಕೆ ಅಧಿಕಾರಿ ವರ್ಗ ಮತ್ತು ಸರಕಾರಗಳ ಬೇಜವಾಬ್ದಾರಿಯೇ ಕಾರಣ ಎಂಬುವುದು ಕ್ರೀಡಾ ಪ್ರೇಮಿಗಳ ಆಕ್ರೋಶ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments