Webdunia - Bharat's app for daily news and videos

Install App

ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಿಂದ ಪ್ರತಿಭಾನ್ವೇಷಣೆ

Webdunia
ಶನಿವಾರ, 3 ಜನವರಿ 2009 (19:43 IST)
ಇತ್ತೀಚೆಗಷ್ಟೇ ಪುಣೆಯಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್ ಸೆಮಿಫೈನಲ್ ಹಂತದಲ್ಲಿ ಕೈ ತಪ್ಪಿ ಹೋದ ಕಾರಣ ಎಚ್ಚರಗೊಂಡಿರುವ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರದಲ್ಲಿ ಕ್ಯಾಂಪ್ ನಡೆಸುವ ಯೋಜನೆ ಕೈಗೆತ್ತಿಕೊಂಡಿದೆ. ತಿಂಗಳ ಕಾಲ ನಡೆಯಲಿರುವ ಈ ಶಿಬಿರ ಪ್ರಮುಖವಾಗಿ ಡಬಲ್ಸ್ ವಿಭಾಗದ ಬ್ಯಾಡ್ಮಿಂಟನ್ ಜೋಡಿಗಳಿಗಾಗಿ ತಲಾಶೆ ನಡೆಸಲಿದೆ.

19 ಮತ್ತು 16ರೊಳಗಿನವರ ವಿಭಾಗದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಈಗಾಗಲೇ 9 ಹುಡುಗರನ್ನು ಹಾಗೂ ಇದೇ ವಿಭಾಗಕ್ಕಾಗಿ 7 ಹುಡುಗಿಯರನ್ನು ಶಿಬಿರಕ್ಕಾಗಿ ಆಯ್ಕೆ ನಡೆಸಲಾಗಿದೆ. ಜನವರಿ ಮ‌ೂರರಿಂದ ಎಂಟರವರೆಗೆ ಗುಂಟೂರಿನಲ್ಲಿ ನಡೆಯಲಿರುವ ಕಿರಿಯರ ರ‌್ಯಾಂಕಿಂಗ್ ಟೂರ್ನಮೆಂಟಿನಲ್ಲಿ ಈ ಆಟಗಾರರು ಭಾಗವಹಿಸಲಿದ್ದಾರೆ. ಗುಂಟೂರಿನಲ್ಲಿನ ಯಾವುದೇ ಪ್ರತಿಭೆಗಳಿದ್ದರೆ ಬೆಂಗಳೂರು ಶಿಬಿರಕ್ಕೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ತರಬೇತುದಾರರು ತಿಳಿಸಿದ್ದಾರೆ.

2012 ರ ಲಂಡನ್ ಒಲಿಂಪಿಕ್ಸ್ ಗೇಮ್ಸನ್ನು ಗಮನದಲ್ಲಿಟ್ಟುಕೊಂಡು ಈ ಕ್ಯಾಂಪ್ ನಡೆಸಲಾಗುತ್ತದೆ ಎಂದು ಕಿರಿಯರ ವಿಭಾಗದ ಮುಖ್ಯ ತರಬೇತುದಾರ ಸಂಜೀವ್ ಸಚ್‌ದೇವ್ ಮಾಹಿತಿ ನೀಡಿದ್ದಾರೆ.

" ಆರು ತಿಂಗಳ ಹಿಂದೆ ಇದೇ ರೀತಿಯ ಶಿಬಿರವನ್ನು ಜಲಂಧರ್‌ನಲ್ಲಿಯೂ ನಡೆಸಿದ್ದೆವು. ಆದರೆ ನಮಗೆ ದೊಡ್ಡ ಗಾತ್ರದಲ್ಲಿ ಆಟಗಾರರು ಬೇಕಾಗಿದ್ದಾರೆ. ಹೊಸ ಪ್ರತಿಭೆಗಳನ್ನು ಹುಡುಕಿ ಡಬಲ್ಸ್ ವಿಭಾಗದಲ್ಲಿ ತರಬೇತಿಗೊಳಿಸುವ ಉದ್ದೇಶ ನಮ್ಮದು. ಈ ತರಬೇತಿ ಶಿಬಿರವನ್ನು ಇಂಡೋನೇಷಿಯಾದ ಕೋಚ್ ಹ್ಯಾಡಿ ಇಡ್ರಿಸ್ ನಡೆಸಿಕೊಡಲಿದ್ದಾರೆ" ಎಂದು ಅವರು ಹೇಳಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments