Select Your Language

Notifications

webdunia
webdunia
webdunia
webdunia

ಬಡ್ವಿಸರ್ ಫ‌ುಟ್ಬಾಲ್‌ ಪಂದ್ಯದ ಫೈನಲ್ ಬೆಂಗಳೂರಿನಲ್ಲಿ

ಬಡ್ವಿಸರ್ ಫ‌ುಟ್ಬಾಲ್‌ ಪಂದ್ಯದ ಫೈನಲ್ ಬೆಂಗಳೂರಿನಲ್ಲಿ
ಬೆಂಗಳೂರು , ಶನಿವಾರ, 23 ಮಾರ್ಚ್ 2013 (14:03 IST)
PR
PR
ಫ‌ುಟ್ಬಾಲ್‌ ಆಟಗಾರರನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಬಡ್ವಿಸರ್ ಕಪ್‌ ಇಂಡಿಯಾ-2013 ಫ‌ುಟ್ಬಾಲ್‌ ಪಂದ್ಯಾವಳಿಯ ಬೆಂಗಳೂರು ಪ್ರಾದೇಶಿಕ ಫೈನಲ್‌ ಪಂದ್ಯ ಮಾರ್ಚ್‌ 24ರಂದು ನಡೆಯಲಿದೆ.

ಜಾಗತಿಕ ಮಟ್ಟದಲ್ಲಿ ಪ್ರತಿ ನಗರದಲ್ಲಿ ಈ ಟೂರ್ನಿ ನಡೆಯುತ್ತಿದ್ದು, ಆಯ್ಕೆಯಾದ ಭಾರತದ 6 ನಗರಗಳ ತಂಡಗಳು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಫೈನಲ್ಸ್‌ನಲ್ಲಿ ಪಾಲ್ಗೊಳ್ಳಲಿವೆ. ಇಲ್ಲಿ ಜಯಿಸಿದ ತಂಡಗಳು ಲಂಡನ್‌ನಲ್ಲಿ ನಡೆಯುವ ಜಾಗತಿಕ ಬಡ್ವಿಸರ್ ಅಂತಿಮ ಸುತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಲಿವೆ.

2009ರಲ್ಲಿ ಓಲ್ಡ್‌ ಟ್ರಾಫ‌ರ್ಡ್‌ನಲ್ಲಿ ನಡೆದ ಬಡ್ವಿಸರ್ ಫ‌ುಟ್ಬಾಲ್‌ ಕಪ್‌ನ ಅಂತಿಮ ಸುತ್ತಿನಲ್ಲಿ ದೇಶದ 224 ತಂಡಗಳು ಭಾರತವನ್ನು ಪ್ರತಿನಿಧಿಸಲು ಪೈಪೋಟಿ ನಡೆಸಿದ್ದವು ಎಂದು ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada