Select Your Language

Notifications

webdunia
webdunia
webdunia
webdunia

ಫ್ರೆಂಚ್‌ ಓಪನ್‌‌ ಪ್ರಶಸ್ತಿಯ ಮೊತ್ತದಲ್ಲಿ ಹೆಚ್ಚಳ

ಫ್ರೆಂಚ್‌ ಓಪನ್‌‌ ಪ್ರಶಸ್ತಿಯ ಮೊತ್ತದಲ್ಲಿ ಹೆಚ್ಚಳ
ಪ್ಯಾರಿಸ್‌ , ಬುಧವಾರ, 16 ಏಪ್ರಿಲ್ 2014 (16:58 IST)
PR
ಇದೇ ವರ್ಷ ನಡೆಯಲಿರುವ ಫ್ರೆಂಚ್‌‌ ಓಪನ್‌‌ನ ಪುರಸ್ಕಾರದ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ.10 ರಷ್ಟು ಬಹುಮಾನದ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಈ ವರ್ಷದ ಮೊತ್ತ 25 ಮಿಲಿಯನ್‌ ಯೂರೊ ( 34.5 ಮಿಲಿಯನ್‌‌ ಡಾಲರ್‌) ಆಗಿದೆ ಎಂದು ಫ್ರೆಂಚ್‌‌ ಟೆನಿಸ್‌‌‌ ಫೆಡರೆಶನ್‌‌‌‌ ಘೋಷಣೆ ಮಾಡಿದೆ.

ಪುರುಷ ಮತ್ತು ಮಹಿಳಾ ಸಿಂಗಲ್ಸ್‌‌ನಲ್ಲಿ ಗೆಲುವನ್ನು ಸಾಧಿಸಿದ ಆಟಗಾರರಿಗೆ 1.65 ಮಿಲಿಯನ್‌‌ ಯೂರೋ ಸಿಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ.10 ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರಾರಂಭದಲ್ಲಿ ಗೆಲುವು ಸಾಧಿಸಿದವರಿಗೆ ಹೆಚ್ಚಿನ ಮೊತ್ತದ ಬಹುಮಾನ ಲಭಿಸಲಿದೆ.

ಎರಡನೇ , ಮೂರನೇ ಮತ್ತು ನಾಲ್ಕನೇ ಸುತ್ತಿನಲ್ಲಿ ಮುನ್ನಡೆ ಸಾಧಿಸದ ಆಟಗಾರರಿಗೆ ನೀಡುವ ಬಹುಮಾನದ ಮೊತ್ತದಲ್ಲಿ ಶೇ.20 ರಿಂದ 25 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada