Select Your Language

Notifications

webdunia
webdunia
webdunia
webdunia

ಪ್ಯೂಚರ್ಸ ಟೂರ್ನಮೆಂಟ್‌ : ಯುಕಿ, ವಿಷ್ಣು, ಬಾಲಾಜಿ ಸೆಮಿಫೈನಲ್‌ಗೆ ಪ್ರವೇಶ

ಪ್ಯೂಚರ್ಸ ಟೂರ್ನಮೆಂಟ್‌ : ಯುಕಿ, ವಿಷ್ಣು, ಬಾಲಾಜಿ ಸೆಮಿಫೈನಲ್‌ಗೆ ಪ್ರವೇಶ
ನವದೆಹಲಿ , ಶುಕ್ರವಾರ, 15 ನವೆಂಬರ್ 2013 (14:55 IST)
PR
ದೆಹಲಿಯಲ್ಲಿ ನಡೆಯುತ್ತಿರುವ ಐಟಿಎಫ್‌‌ ಪ್ಯೂಚರ್ಸ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಣಿಯ ಆಟಗಾರ ಯುಕಿ ಭಾಂಬ್ರಿ ಮತ್ತು ವಿಷ್ಣುವರ್ಧನ್‌ ಸೆಮಿಫೈನಲ್‌ ತಲುಪಿದ್ದಾರೆ.

ವಿಶ್ವ ಶ್ರೇಯಾಂಕಿತದಲ್ಲಿ 202 ನೇ ಸ್ಥಾನದಲ್ಲಿರುವ ಯುಕಿ, ತಮ್ಮ ಎದುರಾಳಿಯಾದ ಕರುಣೋದಯ ಸಿಂಗ್‌ರನ್ನು 6-0, 6-3 ಅಂತರದಿಂದ ಸೋಲಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ ವಿಷ್ಣು ತಮ್ಮ ಎದುರಾಳಿಯಾದ ಎರಡನೇ ಶ್ರೇಯಾಂಕಿತ ಜೀವನ್ ನೆದುಂಚೆಜಿಯನ್‌ರನ್ನು 6-3, 6-2 ಅಂತರದಿಂದ ಸೋಲಿಸಿದ್ದಾರೆ.

ವಿಷ್ಣು ಮುಂದಿನ ಪಂದ್ಯದಲ್ಲಿ, ತೈಪೆ ದೇಶದ ಜುಯಿ ಚೆನ್ ಹುಂಗ್‌ರನ್ನು 3-6, 6-3, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ ಎನ್‌. ಶ್ರೀರಾಮ್ ಬಾಲಾಜಿ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಯುಕಿ ಮುಂದಿನ ಪಂದ್ಯದಲ್ಲಿ. ಸಿದ್ಧಾರ್ಥ್ ರಾವತ್ ವಿರುದ್ಧ 6-2, 6-3 ಸೆಟ್‌ಗಳ ಅಂತರದಿಂದ ಜಯಗಳಿಸಿದ ಜರ್ಮನಿಯ 5ನೇ ಶ್ರೇಯಾಂಕಿತ ಆಟಗಾರ ಟಿ.ವಿತೊಸ್ಕಾ ವಿರುದ್ಧ ಪಂದ್ಯವನ್ನಾಡಲಿದ್ದಾರೆ.

Share this Story:

Follow Webdunia kannada