Select Your Language

Notifications

webdunia
webdunia
webdunia
webdunia

ಪೋಲ್ ವಾಲ್ಟ್: ನನ್ನ ವಿಶ್ವದಾಖಲೆ ಮುರಿಯುವೆ-ಯೆಲೆನಾ

ಪೋಲ್ ವಾಲ್ಟ್: ನನ್ನ ವಿಶ್ವದಾಖಲೆ ಮುರಿಯುವೆ-ಯೆಲೆನಾ
ರಷ್ಯಾ , ಬುಧವಾರ, 30 ಜುಲೈ 2008 (13:05 IST)
PTI
ಯೆಲೆನಾ ಇಸಿನ್‌‌ಬೆವಾ ಅವರು ಬೀಜಿಂಗ್ ಒಲಿಂಪಿಕ್ಸ್‌‌ನ ಮಹಿಳಾ ಪೋಲ್ ವಾಲ್ಟ್ (ಕೋಲು ನೆಗೆತ) ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಇಚ್ಚೆ ಹೊಂದಿದ್ದು, ತನ್ನದೇ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿಯುವ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.

26ರ ಹರೆಯದ ರಷ್ಯಾದ ಯೆಲೆನಾ ಇಸಿನ್‌‌ಬೆವಾ ಅವರು ಒಲಿಂಪಿಕ್ ಹಾಗೂ ವರ್ಲ್ಡ್ ಚಾಂಪಿಯನ್‌‌ಷಿಪ್‌‌ನ ಪೋಲ್ ವಾಲ್ಟ್ ಮಹಿಳಾ ವಿಭಾಗದಲ್ಲಿ ತನ್ನದೇ ಹೆಸರಿನ ದಾಖಲೆಯನ್ನು ಮುರಿಯುವ ಹವಣಿಕೆಯಲ್ಲಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಇಸಿನ್‌‌ಬೆವಾ ಅವರು 5ಮೀಟರ್ ಮತ್ತು ನಾಲ್ಕು ಸೆಂಟಿಮೀಟರ್ ಎತ್ತರಕ್ಕೆ ನೆಗೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಅವರು ಮೊನಾಕೋ ಗ್ರ್ಯಾಂಡ್ ಪ್ರಿಕ್ಸ್‌‌ನ ಮಹಿಳಾ ಪೋಲ್ ವಾಲ್ಟ್‌ನಲ್ಲಿ 5.4 ಸೆಂಟಿಮೀಟರ್ ಎತ್ತರಕ್ಕೆ ನೆಗೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ರೋಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಇಸಿನ್‌‌ಬೆವಾ ಈ ಕೀರ್ತಿಗೆ ಭಾಜನರಾಗಿದ್ದರು.

Share this Story:

Follow Webdunia kannada