Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್‌‌ ಓಪನ್‌‌: ಸೆಮಿಫೈನಲ್‌‌‌‌‌‌‌‌ನಲ್ಲಿ ಸೋತ ಅರವಿಂದ್

ನ್ಯೂಜಿಲೆಂಡ್‌‌ ಓಪನ್‌‌: ಸೆಮಿಫೈನಲ್‌‌‌‌‌‌‌‌ನಲ್ಲಿ ಸೋತ ಅರವಿಂದ್
ನವದೆಹಲಿ , ಶನಿವಾರ, 19 ಏಪ್ರಿಲ್ 2014 (16:45 IST)
PR
50,000 ಡಾಲರ್‌ ಮೊತ್ತದ ಬಹುಮಾನವುಳ್ಳ ನ್ಯೂಜಿಲೆಂಡ್‌‌‌‌ ಓಪನ್‌ ಸೆಮಿಫೈನಲ್‌‌‌ನಲ್ಲಿ ಜರ್ಮನ್ ಓಪನ್‌ ಚಾಂಪಿಯನ್ ಅರವಿಂದ್ ಭಟ್ ತಮ್ಮ ಎದುರಾಳಿಯಾದ ಚೀನಾದ ತೈಪೆಯ ಅಗ್ರ ಶ್ರೇಣಿಯ ಜೆನ್‌ ಹಾವೊ ಸು ರಿಂದ ನೇರ ಸೆಟ್‌‌‌ಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ.

33 ನಿಮಿಷದವರೆಗೆ ನಡೆದ ಪುರುಷ ಸಿಂಗಲ್ಸ್‌‌‌ನ ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಭಾರತೀಯ ಆಟಗಾರ ಅರವಿಂದ್ ತಮ್ಮ ಎದುರಾಳಿಯಾದ ಹಾವೊ ಸು ರಿಂದ 14-21, 9-21 ಸೆಟ್‌‌ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅರವಿಂದ 2-5 ಅಂತರದಿಂದ ಹಿನ್ನಡೆ ಸಾಧಿಸಿದ್ದರು , ಆದರೆ ನಂತರ 6-6 ಅಂತರಕ್ಕೆ ಸಮನಾಗಿ ಇದ್ದರು. ಆದರೆ ಜೆನ್ ಹುವೋ ಸಯ 9-9 ಅಂತರದಿಂದ ಮುನ್ನಡೆ ಸಾಧಿಸಿದ್ದರು.

ಎರಡನೇ ಪಂದ್ಯದಲ್ಲಿ ಜೆನ್‌ ಹುವೊ ಸು ಉತ್ತಮ ಪ್ರದರ್ಶನ ನೀಡುವ ಮೂಲಕ 4-4 ಸ್ಕೋರ್‌ಗಳಿಂದ 9-4 ಅಂತರದಿಂದ ಮುನ್ನಡೆಯಲ್ಲಿದ್ದರು ಮತ್ತು 16-5 ಅಂತರದಿಂದ ಮುನ್ನಡೆ ಸಾಧಿಸಿದ ನಂತರ ಫೈನಲ್‌‌‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Share this Story:

Follow Webdunia kannada