Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್‌‌‌‌ ಓಪನ್‌: ಸೌರಭ , ಅರವಿಂದ್‌ಗೆ ಮುನ್ನಡೆ

ನ್ಯೂಜಿಲೆಂಡ್‌‌‌‌ ಓಪನ್‌: ಸೌರಭ , ಅರವಿಂದ್‌ಗೆ ಮುನ್ನಡೆ
ನವದೆಹಲಿ , ಬುಧವಾರ, 16 ಏಪ್ರಿಲ್ 2014 (16:54 IST)
PR
ಸ್ಕೈ ಸಿಟಿ ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌‌‌ನ ಪುರುಷ ಸಿಂಗಲ್ಸ್‌‌ನಲ್ಲಿ ಭಾರತೀಯ ಬಾಡ್ಮಿಂಟನ್‌‌‌‌ ಆಟಗಾರಾದ ಸೌರಭ ವರ್ಮಾ ಮತ್ತು ಅರವಿಂದ ಭಟ್‌‌‌‌ ಗೆಲುವನ್ನು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಎರಡನೇ ಶ್ರೇಯಾಂಕಿತ ಸೌರಭ ತಮ್ಮ ಎದುರಾಳಿಯಾದ ಸ್ಥಳಿಯ ಆಟಗಾರನಾದ ಜೆಮ್ಸ್‌ ಯುನಸನ್‌‌‌‌ರನ್ನು ನೇರ ಸೆಟ್‌‌‌‌‌‌ ಮೂಲಕ ಸೋಲಿಸಿದ್ದಾರೆ . ಆದರೆ 5ನೇ ಶ್ರೇಯಾಂಕಿತ ಅರವಿಂದ, ಮಲೇಷಿಯಾದ ಝೆನ್‌ ಟಿಂಗ್‌ ಲಿಮ ರನ್ನು ಸೋಲಿಸುವುವಲ್ಲಿ ಬಹಳಷ್ಟು ಕಷ್ಟ ಪಡಬೇಕಾಯಿತು.

ಸೌರಭ ತಮ್ಮ ಎದುರಾಳಿಯಾದ ಯುನಸನ್‌‌‌‌ರನ್ನು 30 ನಿಮಿಷದಲ್ಲಿ 21-16, 21-14 ಸೆಟ್‌‌‌‌‌ಗಳ ಅಂತರದಿಂದ ಮತ್ತು ಜರ್ಮನ ಓಪನ್‌‌ ಚಾಂಪಿಯನ್‌‌‌ ಅರವಿಂದ ತಮ್ಮ 33 ನಿಮಿಷದವರೆಗೆ ನಡೆದ ಪಂದ್ಯದಲ್ಲಿ ಲಿಮ್‌‌ರನ್ನು 21-9, 14-21, 21-7 ಸೆಟ್‌‌ಗಳ ಅಂತರದಿಂದ ಸೋಲಿಸಿದ್ದಾರೆ.

Share this Story:

Follow Webdunia kannada