Webdunia - Bharat's app for daily news and videos

Install App

ನಿಯಮ ಮರುಪರಿಶೀಲನೆಗೆ ಪೊಸೆರಿಯಾ ಒತ್ತಾಯ

Webdunia
ಶನಿವಾರ, 3 ಜನವರಿ 2009 (19:42 IST)
ಭಾರತ ಮ‌ೂಲದ ವಿದೇಶೀ ಕ್ರೀಡಾಳುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಧ್ವಜ ಹಿಡಿದು ಪ್ರತಿನಿಧಿಸುವಂತಿಲ್ಲ ಎಂದು ನಿಷೇಧ ವಿಧಿಸಿರುವ ಸರಕಾರದ ನಿಯಮವನ್ನು ಮರುಪರಿಶೀಲಿಸಬೇಕು ಎಂದು ಅಮೆರಿಕಾದ ಈಜುಪಟು ಅಂಕುರ್ ಪೊಸೆರಿಯಾ ಒತ್ತಾಯಿಸಿದ್ದಾರೆ.

ಅಂಕುರ್ ಪೊಸೆರಿಯಾ ಬೀಜಿಂಗ್ ಒಲಿಂಪಿಕ್ಸ್, ದೋಹಾ ಏಷಿಯಾಡ್ ಮತ್ತು ಎರಡು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಭಾರತ ಸರಕಾರದ ಈ ನಿಯಮದಿಂದಾಗಿ ಭಾರತೀಯ ಅಥ್ಲೀಟ್ ಆದ ನನ್ನ ಅಂತಾರಾಷ್ಟ್ರೀಯ ಕ್ರೀಡಾ ಜೀವನ ಅಂತ್ಯಗೊಳ್ಳಬಹುದು ಎಂದು ಭೀತಿ ವ್ಯಕ್ತಪಡಿಸಿದ ಅವರು ಮರುಪರಿಶೀಲನೆಗೆ ಭಾರತ ಸರಕಾರವನ್ನು ಒತ್ತಾಯಿಸಿದ್ದಾರೆ.

" ಭಾರತ ಮ‌ೂಲದ ವಿದೇಶೀ ಆಟಗಾರರನ್ನು ಪ್ರತಿಬಂಧಿಸಿರುವ ನಿಯಮಗಳನ್ನು ದಯವಿಟ್ಟು ಮರುಪರಿಶೀಲಿಸಬೇಕು ಎಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ. ಇದರಿಂದಾಗಿ ನಮ್ಮ ಕ್ರೀಡಾ ಸ್ಫೂರ್ತಿ, ಪ್ರಗತಿಗೆ ಧಕ್ಕೆಯಾಗಲಿದ್ದು ಭಾರತ ಮ‌ೂಲದವರಿಗೆ ತೀವ್ರ ನೋವುಂಟು ಮಾಡಲಿದೆ" ಎಂದು ಕ್ಯಾಲಿಫೋರ್ನಿಯಾದಲ್ಲಿ ಮಾತನಾಡುತ್ತಾ ಹೇಳಿದರು.

ಭಾರತಕ್ಕೆ ಮರಳುವಷ್ಟು ಆರ್ಥಿಕವಾಗಿ ಮುಂದುವರಿದವನು ತಾನಲ್ಲ. ಒಬ್ಬ ಒಲಿಂಪಿಕ್ ಈಜುಪಟುವಾಗಿ ನಾನು ಇತಿಹಾಸದಲ್ಲೇ ಭಾರತ ಮ‌ೂಲದ ವೇಗದ ಈಜುಪಟುವಾಗಿದ್ದೇನೆ. ವಿಶ್ವದಲ್ಲೇ ಭಾರತ ಮ‌ೂಲದ 100 ಮೀಟರ್ ಈಜು ಸ್ಪರ್ಧೆಯಲ್ಲಿ ಅಗ್ರ ಸ್ಥಾನದಲ್ಲಿರುವುದು ನನ್ನ ಹೆಸರು ಎಂದು ಪೊಸೆರಿಯಾ ತಿಳಿಸಿದ್ದಾರೆ.

" ನಾನು ಭಾರತವನ್ನು ಈಜು ಕ್ಷೇತ್ರವಾಗಿ ಬಳಸಿಕೊಂಡಿದ್ದೇನೆ. ಯಾಕೆಂದರೆ ನಾನು ನನ್ನ ಪರಂಪರೆ, ಕುಟುಂಬ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಭಾರತೀಯ ಎನ್ನುವುದು ನನಗೆ ಹೆಮ್ಮೆ. ಒಬ್ಬ ಭಾರತೀಯನಾಗಿ ತಿರಂಗದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವುದು ನನಗೆ ಹೆಮ್ಮೆಯೆನಿಸುತ್ತದೆ" ಎಂದು ಪೊಸೆರಿಯಾ ಅಭಿಮಾನದ ಮಾತುಗಳನ್ನಾಡಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments