Webdunia - Bharat's app for daily news and videos

Install App

ನನಗೆ ಮತ್ತೆ ವಿವಾಹವಾಗಲು ಇಷ್ಟ: ಯುವಕರಲ್ಲಿ ಕಿಚ್ಚು ಹಚ್ಚಿದ ಜ್ವಾಲಾ ಗುಟ್ಟಾ

Webdunia
ಮಂಗಳವಾರ, 3 ಸೆಪ್ಟಂಬರ್ 2013 (15:26 IST)
PTI
ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಜ್ವಾಲಾ ಗುಟ್ಟಾ, ಕ್ರೀಡೆಯನ್ನು ಹೊರತುಪಡಿಸಿ ವೈಯಕ್ತಿಕ ವಿಷಯಗಳತ್ತ ಕೂಡಾ ಹೆಡ್‌ಲೈನ್‌ಗಳಲ್ಲಿ ಮಿಂಚಿದ್ದಾರೆ. ಇದೀಗ ನನಗೆ ಮತ್ತೆ ಮದುವೆಯಾಗಲು ಇಷ್ಟ ಎಂದು ನುಲಿದಿದ್ದಾಳೆ.

ಹಲವಾರು ವಿವಾದಗಳ ಮಧ್ಯೆಯೂ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದು ಅಗ್ರ ಆಟಗಾರ್ತಿಯಾಗಿಯಾಗಿದ್ದಾರೆ. ತೆಲಗು ಚಿತ್ರವೊಂದರಲ್ಲಿ ಐಟಂ ಸಾಂಗ್‌ನಲ್ಲಿ ನಟಿಸಿ ತಮ್ಮ ಮಾದಕ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ.

ನಾನು ಕೇವಲ ಕ್ರೀಡೆಯತ್ತ ಗಮನಹರಿಸುತ್ತೇನೆ. ನನಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಕೆಲಸ ಮಾಡಲು ಬಯಸುತ್ತೇನೆ. ಚಿತ್ರದ ಕಥೆ ಉತ್ತಮವಾಗಿದ್ದಲ್ಲಿ ಚಿತ್ರದಲ್ಲಿ ನಟಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ, ಇಲ್ಲಿಯವರೆಗೆ ನಿರ್ಮಾಪಕರು ಚಿತ್ರದಲ್ಲಿ ನಟಿಸುವಂತೆ ಆಹ್ವಾನ ನೀಡಿಲ್ಲ ಎಂದರು.

ನನಗೆ ದೇವರು ಮೋಹಕ ಸೌಂದರ್ಯ ನೀಡಿರುವುದಕ್ಕೆ ನಾನು ತುಂಬಾ ಅದೃಷ್ಠಶಾಲಿಯಾಗಿದ್ದೇನೆ. ನಾನು ಸೌಂದರ್ಯವನ್ನು ಕಾಪಾಡಲು ಅಗತ್ಯವಾದ ಸೌಂದರ್ಯವರ್ಧಕಗಳನ್ನು ಬಳಸುತ್ತೇನೆ ಎಂದು ತಿಳಿಸಿದ್ದಾರೆ.

29 ವರ್ಷ ವಯಸ್ಸಿನ ಜ್ವಾಲಾ ಗುಟ್ಟಾ ವಿವಾಹವಾದ ಆರು ವರ್ಷಗಳ ನಂತರ ತಮ್ಮ ಪತಿ ಬ್ಯಾಡ್ಮಿಂಟನ್ ಕ್ರೀಡಾಪಟು ಚೇತನ್ ಆನಂದ್‌ಗೆ ವಿಚ್ಚೇದನ ನೀಡಿದ್ದಾರೆ. ಮರುವಿವಾಹವಾಗಲು ತುಂಬಾ ಇಷ್ಟ. ಆದರೆ, ಸದ್ಯಕ್ಕೆ ಕ್ರೀಡೆಯ ಬಗ್ಗೆ ಮಾತ್ರ ಗಮನಹರಿಸುತ್ತೇನೆ ಎಂದು ಜ್ವಾಲಾ ಗುಟ್ಟಾ ತಮ್ಮ ಮನದಾಳವನ್ನು ಬಹಿರಂಗಗೊಳಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ