Select Your Language

Notifications

webdunia
webdunia
webdunia
webdunia

ನಡಾಲ್‌ ಐತಿಹಾಸಿಕ ದಾಖಲೆಯ ಕನಸು ಮುರಿದ ವಾವರಿಂಕಾ

ನಡಾಲ್‌ ಐತಿಹಾಸಿಕ ದಾಖಲೆಯ ಕನಸು ಮುರಿದ ವಾವರಿಂಕಾ
ಮೆಲ್ಬೊರ್ನ್ , ಸೋಮವಾರ, 27 ಜನವರಿ 2014 (16:16 IST)
PR
ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ಸ್ಪೇನ್‌ ದೇಶದ ರಾಫೇಲ್‌ ನಡಾಲ್‌ರ ಐತಿಹಾಸಿಕ ಪುರುಷ ಆಗುವ ಕನಸನ್ನು ಸ್ವಿರ್ಜಲೆಂಡ್‌ ದೇಶದ ಸ್ಟೆನ್ಸಿಸ್ಲಾಸ್ ವಾವರಿಂಕಾ ಮುರಿದಿದ್ದಾರೆ. ಆಸ್ಟ್ರೇಲಿಯಾ ಓಪನ್‌‌ ಪುರುಷ ವಿಭಾಗದ ಸಿಂಗಲ್ಸ್‌‌‌ ಪ್ರಶಸ್ತಿಯನ್ನು ವಾವರಿಂಕಾ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವಾವರಿಂಕರವರು ಟಾಪ್‌‌ ಸಿಡ್‌ ನಡಾಲ್‌ರವರನ್ನು 4 ಸೆಟ್‌‌ಗಳವರೆಗೆ ನಡೆದ ಹಣಾಹಣಿಯಲ್ಲಿ
6-3, 6-2, 3-6, 6-3 ಸೆಟ್‌ಗಳ ಅಂತರದಿಂದ ತಮ್ಮ ಮೊದಲ ಗ್ರ್ಯಾಂಡ್‌ ಸ್ಲಾಮ್‌‌ ಪ್ರಶಸ್ತಿಯನ್ನು ಪಡೆದಿದ್ದಾರೆ. 8 ನೇ ಶ್ರೇಯಾಂಕಿತ ವಾವರಿಂಕಾರವರು ಸ್ಪೇನ್‌ ದೇಶದ ಆಟಗಾರ ಕಳಪೆ ಪ್ರದರ್ಶನದ ಅವಕಾಶ ಸುಲಭದಲ್ಲಿ ಪಡೆದುಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾಗಿ ಮೊದಲ ಎರಡನೇ ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರು.

ಎರಡನೇ ಸೆಟ್‌‌ಗಳ ಪ್ರಾರಂಭದಲ್ಲಿ ನಡಾಲ್‌ರವರು ಹೊಟ್ಟೆಗೆ ಗಾಯವಾದ ಕಾರಣ ಈ ಅಗ್ರ ಶ್ರೇಣಿಯ ಆಟಗಾರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಆದರೆ ಈ ಅನುಭವಿ ಆಟಗಾರ ಮೂರನೇ ಸೆಟ್‌‌ಗಳಲ್ಲಿ 6-3 ಅಂತರದಿಂದ ಮುನ್ನಡೆ ಸಾಧಿಸಿದ್ದರು .

ಮೈದಾನದಲ್ಲಿ ನಡಾಲ್‌ ಉತ್ತಮ ಪ್ರದರ್ಶನ ನೀಡುತ್ತಿದ್ದರು ಆದರು ಕೂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ವಿಫಲರಾದರು. ವಾವರಿಂಕಾ 4ನೇ ಮತ್ತು ನಿರ್ಣಾಯಕ ಸೆಟ್‌‌ನ 6ನೇ ಪಂದ್ಯದಲ್ಲಿ ಎರಡು ಬ್ರೆಕ್‌ ಪಾಯಿಂಟ್‌ ಗಳಿಸಿದರು. ಸ್ವಿಸ್‌‌ನ ಈ ಆಟಗಾರ ಉತ್ತಮ ಪ್ರದರ್ಶನ ನೀಡುದರು. ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ವಾವರಿಂಕಾ ಗೆಲುವು ತಮ್ಮದಾಗಿಸಿಕೊಂಡು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಳ್ಳುವುದರಲ್ಲಿ ಸಫಲರಾದರು. ವಾವರಿಂಕಾ ಅವರಿಗೆ ಇದು ಮೊದಲ ಪ್ರಶಸ್ತಿಯಾಗಿದೆ .

Share this Story:

Follow Webdunia kannada