Select Your Language

Notifications

webdunia
webdunia
webdunia
webdunia

ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್, ಆನಂದ್ ಶುಭಾರಂಭ

ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್, ಆನಂದ್ ಶುಭಾರಂಭ
ನವದೆಹಲಿ , ಗುರುವಾರ, 20 ಅಕ್ಟೋಬರ್ 2011 (11:56 IST)
PTI
ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್, ತಮ್ಮ ಎದುರಾಳಿ ವಿರುದ್ಧ ಸುಲಭ ಜಯಗಳಿಸಿ ಶುಭಾರಂಭ ಮಾಡಿದ್ದಾರೆ,

ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ನಾಲ್ಕನೇ ಶ್ರೇಯಾಂಕದಲ್ಲಿರುವ ಸೈನಾ, ತಮ್ಮ ಥೈಲೆಂಡ್ ಎದುರಾಳಿ ಪೊರ್ಣ್‌ಟಿಪ್ ಬುರಾನಾಪ್ರಾಸೆರ್‌ಸುಕ್ ವಿರುದ್ಧ 21-16, 21-8 ಜಯಗಳಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.

ಪುರುಷರ ವಿಭಾಗದಲ್ಲಿ ಆನಂದ್, ತಮ್ಮ ಎದುರಾಳಿ ಪಾಬ್ಲೊ ಅಬಿಯಾನ್ ವಿರುದ್ಧ 21-11, 21-12 ಸೆಟ್‌ಗಳಿಂದ ಜಯಗಳಿಸಿ ಶುಭಾರಂಭ ಮಾಡಿದ್ದಾರೆ.

ಸೈನಾ, ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಎದುರಾಳಿ ತುಜು ಯಿಂಗ್ ತೈ ವಿರುದ್ಧ ಹಣಾಹಣಿ ನಡೆಸಲಿದ್ದಾರೆ. ಆನಂದ್, ಎರಡನೇ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್ ಅಥವಾ ಮಲೇಷಿಯಾದ ಲಿ ಚೊಂಗ್ ವೈ ವಿರುದ್ಧ ಹೋರಾಟ ನಡೆಸಲಿದ್ದಾರೆ.

ಏತನ್ಮಧ್ಯೆ, ಭಾರತದ ಮತ್ತೊಬ್ಬ ಆಟಗಾರ ಅಜಯ್ ಜಯರಾಮ್, ತಮ್ಮ ಎದುರಾಳಿ ಟಾಮಿ ಸುಗಿಯಾರ್ಟೊ ವಿರುದ್ಧ ಸೋಲನುಭವಿಸಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪಾ ಜೋಡಿ, ತಮ್ಮ ಎದುರಾಳಿ ಶಿಂಟಾ ಮುಲಿಯಾ ಮತ್ತು ಸಿಂಗಾಪೂರ್‌ ಆಟಗಾರ್ತಿ ಲಿ ಯಾವೊ ವಿರುದ್ಧ 16-21, 17-21 ಸೆಟ್‌ಗಳಿಂದ ಸೋಲನುಭವಿಸಿ ಆಘಾತ ಅನುಭವಿಸಿದ್ದಾರೆ.

Share this Story:

Follow Webdunia kannada