Select Your Language

Notifications

webdunia
webdunia
webdunia
webdunia

ಟಾಟಾ ಚೆಸ್: ವಿಶ್ವನಾಥನ್ ಆನಂದ್‌ಗೆ ಎರಡನೇ ಸ್ಥಾನ

ಟಾಟಾ ಚೆಸ್: ವಿಶ್ವನಾಥನ್ ಆನಂದ್‌ಗೆ ಎರಡನೇ ಸ್ಥಾನ
ವಿಜ್ಕ್ ಆನ್ ಝಿ , ಸೋಮವಾರ, 31 ಜನವರಿ 2011 (15:12 IST)
PTI
ಟಾಟಾ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಐದು ಬಾರಿ ವಿಜೇತ ಆಟಗಾರ ವಿಶ್ವನಾಥನ್ ಆನಂದ್,ರಷ್ಯಾದ ಎದುರಾಳಿ ಇಯಾನ್ ನೆಪೊನಿಯಾಚಾಚಿ ವಿರುದ್ಧ ಡ್ರಾ ಮಾಡಿಕೊಳ್ಳುವುದರೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಮುಂದಿನ ಕೆಲ ದಿನಗಳಲ್ಲಿ ವಿಶ್ವ ಚೆಸ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಲಿದ್ದು, ಅಗ್ರಸ್ಥಾನದಲ್ಲಿರುವ ನಾರ್ವೆಯ ಮಾಗ್ನಸ್ ಕಾರ್ಲ್ಸನ್ ಅವರನ್ನು ಹಿಂದಿಕ್ಕಿ ವಿಶ್ವನಾಥನ್ ಆನಂದ್ ಮತ್ತೆ ಅಗ್ರಸ್ಥಾನವನ್ನು ಪಡೆಯಲಿದ್ದಾರೆ ಎಂದು ಚೆಸ್ ಮೂಲಗಳು ತಿಳಿಸಿವೆ.

ಅಮೆರಿಕದ ಹಿಕಾರು ನಕಾಮುರಾ, ಅಂತಿಮ ಸುತ್ತಿನ ಪಂದ್ಯದಲ್ಲಿ ಚೀನಾದ ಆಟಗಾರ ವೊಂಗ್ ಹಾವೊ ವಿರುದ್ಧ ಜಯಗಳಿಸಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಂದ್ಯದ ಫಲಿತಾಂಶ ತುಂಬಾ ನಿರಾಸೆ ತಂದಿದೆ ಎಂದು ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ವಿಶ್ವನಾಥನ್ ಆನಂದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Share this Story:

Follow Webdunia kannada