Webdunia - Bharat's app for daily news and videos

Install App

ಚಾಂಪಿಯನ್ಸ್‌ ಚಾಲೆಂಜ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ

Webdunia
ಬುಧವಾರ, 30 ನವೆಂಬರ್ 2011 (11:24 IST)
WD
ಚಾಂಪಿಯನ್ಸ್‌ ಚಾಲೆಂಜ್‌ ಹಾಕಿ ಪಂದ್ಯಾವಳಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ಪೋಲೆಂಡ್‌ ವಿರುದ್ಧ 7-0 ಅಂತರದಲ್ಲಿ ಜಯಗಳಿಸುವ ಮೂಲಕ ಕ್ವಾರ್ಟರ್ ಫೈನಲ್‌ ತಲುಪಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲೀಗ್‌ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿದ ನಂತರ ಎರಡೂ ಪಂದ್ಯಗಳಲ್ಲಿ ತಲಾ ಏಳು ಗೋಲು ದಾಖಲಿಸಿ ಎ ಗ್ರೂಪ್‌ನಲ್ಲಿ ಅಗ್ರ ಸ್ಥಾನದಲ್ಲಿದೆ.

ಲೀಗ್‌ ಹಂತದ ಎಲ್ಲ ಮೂರು ಪಂದ್ಯಗಳಲ್ಲೂ ಸೋಲನುಭವಿಸಿದ ದುರ್ಬಲ ಪೋಲೆಂಡ್‌ ಮೇಲೆ ಪ್ರಭುತ್ವ ಸಾಧಿಸುವಲ್ಲಿ ಭಾರತದ ಆಟಗಾ ರರ ು ಯಶಸ್ವಿಯಾದರು.

ಭಾರತದ ಪರ ತುಷಾರ್ ಖಾಂಡೇಕರ್ ಹಾಗೂ ಯುವ ಕ್ರೀಡಾಪಟು ವಾಲ್ಮೀಕ ತಲಾ ಎರಡು ಗೋಲು ಗಳಿಸುವ ಮೂಲಕ ಭಾರತ ತಂಡಕ್ಕೆ ಬಲ ನೀಡಿದರು.

ಪಂದ್ಯ ಆರಂಭಗೊಂಡ 19 ನಿಮಿಷದಲ್ಲೇ ಭಾರತದ ಮಂಜೀತ್‌ ಕುಲು ನೀಡಿದ ಚೆಂಡನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. 23 ನೇ ನಿಮಿಷದಲ್ಲಿ ಧನಿಷ್‌ ಮುಜ್ತಾಬಾ ಅವರು ನೀಡಿದ ಪಾಸ್‌ನಲ್ಲಿ ಶಿವೇಂದ್ರ ಸಿಂಗ್‌ ಗೋಲಾಗಿ ಪರಿವರ್ತಿಸಿದರು.

25 ನೇ ನಿಮಿಷದಲ್ಲಿ ಗೋಲು ಗಳಿಸಲು ದೊರೆತಿದ್ದ ಅವಕಾಶವನ್ನು ಥೋಮಸ್‌ ಗಾರ್ನಿ ಸದ್ಬಳಕೆ ಮಾಡಿಕೊಂಡು ಗೋಲಿನಲತ್ತ ಬಾರಿಸಿದರೂ ಸಹಾ ಚೆಂಡು ಗೋಲ್‌ ಬಾಕ್ಸ್‌ ಅಂಚಿಗೆ ಬಡಿದು ಹೊರ ಬಂದಿದ್ದರಿಂದ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಮುಂಬೈ ಆಟಗಾರ ವಾಲ್ಮೀಕಿ 33ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತ ತಂಡವನ್ನು3-0 ಅಂತರದಿಂದ ಮುನ್ನಡೆಸಿದರು. 44ನೇ ನಿಮಿಷದಲ್ಲಿ ಎಸ್‌.ವಿ.ಸುನೀಲ್‌ ನೀಡಿದ ಪಾಸನ್ನು ಗೋಲಾಗಿ ಪರಿವರ್ತಿಸುವಲ್ಲಿ ಮನ್‌ಪ್ರೀತ್‌ಸಿಂಗ್‌ ಯಶಸ್ವಿಯಾ‌ದರು. ಬೀರೇಂದ್ರ ಲಾಕ್ರಾ ರಿವರ್ಸ್‌ ಡ್ರೈವ್‌ನೊಂದಿಗೆ ಭಾರತ 5-0 ಮುನ್ನಡೆ ಸಾಧಿಸಿತ್ತು. ತುಷಾರ್ ಖಾಂಡೇಕರ್‌ 55 ಮತ್ತು 70ನೇ ನಿಮಿಷದಲ್ಲಿ ಎರಡು ಗೋಲು ಬಾರಿಸುವ ಮೂಲಕ ಭಾರತವು 7-0 ಅಂತರದಿಂದ ಮುನ್ನಡೆ ಸಾಧಿಸಿತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments