Select Your Language

Notifications

webdunia
webdunia
webdunia
webdunia

ಗಾಲ್ಫ್‌ ವಿಶ್ವಕಪ್: ಭೂಲ್ಲರ್, ಲಿಹಾಡಿಗೆ ಉತ್ತಮ ಪ್ರದರ್ಶನದ ವಿಶ್ವಾಸ

ಗಾಲ್ಫ್‌ ವಿಶ್ವಕಪ್: ಭೂಲ್ಲರ್, ಲಿಹಾಡಿಗೆ ಉತ್ತಮ ಪ್ರದರ್ಶನದ ವಿಶ್ವಾಸ
, ಶುಕ್ರವಾರ, 29 ನವೆಂಬರ್ 2013 (18:51 IST)
PR
ಮುಂದಿನ ವಾರ ನಡೆಯಲಿರುವ ವಿಶ್ವ ಗಾಲ್ಫ್ ಕಪ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿರುವುದರಿಂದ ಭಾರತದ ಗಗನ್‌ಜಿತ್ ಭೂಲ್ಲರ್ ಮತ್ತು ಅನಿರ್ಬಾನ್ ಲಾಹಿಡಿ ಸಂತಸಗೊಂಡಿದ್ದಾರೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ಗಾಲ್ಪ್‌‌‌ ಕ್ರೀಡೆ ಚೇತರಿಕೆಗೆ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ.

ಮೊದಲ ಬಾರಿ ಗಾಲ್ಫ್‌‌‌ ವಿಶ್ವ ಕಪ್‌ ನಲ್ಲಿ ಭಾಗವಹಿಸುತಿರುವ ಭಾರತದ ಇಬ್ಬರೂ ಗಾಲ್ಫ್ ಆಟಗಾರರು ಆಷ್ಟ್ರೇಲಿಯಾದ ರಾಯಲ್‌ ಮೆಲ್ಬರ್ನ್ ಕ್ಲಬ್‌ನಲ್ಲಿ 21 ರಿಂದ 24 ನವೆಂಬರ್ ಮಧ್ಯೆ ನಡೆಯುವ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ. ಈ ಪಂದ್ಯದಲ್ಲಿ 60 ಗಾಲ್ಫರ್‌ಗಳು ಭಾಗವಹಿಸಿಲಿದ್ದಾರೆ. ಪಂದ್ಯಾವಳಿಯ ಬಹುಮಾನದ ಮೊತ್ತ 80 ಲಕ್ಷ ಡಾಲರ್‌‌ಗೆ ನಿಗದಿಪಡಿಸಲಾಗಿದೆ. .

ಭಾರತದ ಉದಯೋನ್ಮುಖ ಗಾಲ್ಪ್‌ ಆಟಗಾರರು ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಅನೇಕ ಗಾಲ್ಫ್ ಆಟಗಾರರು ಏಷಿಯಾಡ್ ಟೂರ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಎಂದು ಭೂಲ್ಲರ್ ತಿಳಿಸಿದ್ದಾರೆ.

Share this Story:

Follow Webdunia kannada