Select Your Language

Notifications

webdunia
webdunia
webdunia
webdunia

ಖ್ಯಾತ ಫುಟ್ಬಾಲ್ ಆಟಗಾರ ಮೆಸ್ಸಿಗೆ 'ಗೋಲ್ಡನ್ ಶೂ' ಪ್ರಶಸ್ತಿ

ಖ್ಯಾತ ಫುಟ್ಬಾಲ್ ಆಟಗಾರ ಮೆಸ್ಸಿಗೆ 'ಗೋಲ್ಡನ್ ಶೂ' ಪ್ರಶಸ್ತಿ
ಬಾರ್ಸಿಲೊನಾ , ಗುರುವಾರ, 21 ನವೆಂಬರ್ 2013 (15:19 IST)
PR
ಯೂರೋಪ್‌‌ನ ಸ್ವದೇಶಿ ಲೀಗ್‌ನಲ್ಲಿ ಹೆಚ್ಚಿನ ಗೋಲು ದಾಖಲಿಸಿದ್ದರಿಂದ ಬಾರ್ಸಿಲೊನಾ ತಂಡದ ಫಾರವರ್ಡ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಸತತ ಮೂರನೇ ಬಾರಿಗೆ ಗೋಲ್ಡನ್ ಶೂ ಪ್ರಶಸ್ತಿ ಪಡೆಯುವಲ್ಲಿ ಸಫಲರಾಗಿದ್ದಾರೆ.

26 ವರ್ಷದ ಮೆಸ್ಸಿ, 2012-13 ಸಾಲಿನ ಸ್ಪೇನಿಷ್‌ ಲೀಗ್‌ನಲ್ಲಿ ಅತ್ಯಧಿಕ ಗೋಲ್ ದಾಖಲಿಸಿ ತಂಡಕ್ಕೆ ಜಯವನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಕೆಲವು ಸಲ ಗೋಲ್‌ಗಳಿಸಲು ವಿಫಲವಾದರೂ ಪ್ರಸಕ್ತ ವರ್ಷದಲ್ಲಿ 46 ಗೋಲ್‌ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಸ್ಸಿ 2009-10 ರಲ್ಲಿ 34 ಗೋಲ್‌ ಮತ್ತು 2011-12ರಲ್ಲಿ 50 ಗೋಲ್ ಗಳಿಸಿ ಚಿನ್ನದ ಬೂಟು ಪ್ರಶಸ್ತಿ ಪಡೆದಿದ್ದರು.

Share this Story:

Follow Webdunia kannada