Select Your Language

Notifications

webdunia
webdunia
webdunia
webdunia

ಕ್ರೀಡಾಂಗಣ ನಿರ್ಮಾಣ ವೇಳೆಯಲ್ಲಿ ಒಬ್ಬ ಕಾರ್ಮಿಕನ ಸಾವು

ಕ್ರೀಡಾಂಗಣ ನಿರ್ಮಾಣ ವೇಳೆಯಲ್ಲಿ ಒಬ್ಬ ಕಾರ್ಮಿಕನ ಸಾವು
ಮಣಾಟಸ್‌ , ಶನಿವಾರ, 15 ಫೆಬ್ರವರಿ 2014 (16:15 IST)
PR
ಫಿಫಾ ವಿಶ್ವ ಕಪ್‌‌-2014ರ ಆತಿಥ್ಯವಹಿಸಿಕೊಂಡ ಬ್ರಿಜಿಲ್‌‌ನ ಅರೆನಾ ಡಾ ಅಮೆಜೊನಿಯಾ ಕ್ರೀಡಾಂಗಣದ ಹೊರಗಡೆ ನಡೆಯುತ್ತಿರುವ ನಿರ್ಮಾಣ ಕೆಲಸದ ವೇಳೆಯಲ್ಲಿ ನಡೆದ ದುರ್ಘಟನೆಯಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ

ಒಂದು ಕ್ರೇನ್‌‌ನಿಂದ ತಲೆಗೆ ಗಾಯವಾದ ಕಾರಣ 55 ವರ್ಷದ ಕಾರ್ಮಿಕ ಎಂಟೋನಿಯೋ ಜೆಸ್‌‌‌ ಪಿಟಾ ಮಾರ್ಟಿಸ್‌ ಸಾವನ್ನಪ್ಪಿದ್ದಾರೆ . ಈ ಕಾರ್ಮಿಕನ ಸಾವಿನಿಂದ ಫಿಫಾ ಶೋಕ ವ್ಯಕ್ತ ಪಡಿಸಿದೆ.

ಕ್ರಿಡಾಂಗಣದ ನಿರ್ಮಾಣದ ವೇಳೆಯಲ್ಲಿ ಕಾರ್ಮಿಕ ಸಾವನ್ನಪ್ಪಿದ ಕಾರಣ ಫಿಫಾ ಶೋಕ ವ್ಯಕ್ತ ಪಡಿಸಿದೆ ಮತ್ತು ಮೃತ ಕಾರ್ಮಿಕನ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತ ಪಡಿಸಿದೆ .

ಬ್ರೆಜಿಲ್‌‌ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್‌‌ ಸಿದ್ದತೆಯಲ್ಲಿ ಇಲ್ಲಿಯವರೆಗೆ ಒಟ್ಟು ಆರು ದುರ್ಘಟನೆ ನಡೆದಿವೆ. ಮೊದಲ ಧುರ್ಘಟನೆ ಮಾರ್ಚ್ 2013ರಲ್ಲಿ ನಡೆದಿತ್ತು ಮತ್ತು ಡಿಸೆಂಬರ್‌‌ನಲ್ಲಿ ಎರಡನೇ ದುರ್ಘಟನೆ ನಡೆದಿದೆ.

Share this Story:

Follow Webdunia kannada