Select Your Language

Notifications

webdunia
webdunia
webdunia
webdunia

ಐಟಿಎಫ್ ಫ್ಯೂಚರ್ ಓಪನ್: ಯೂಕಿ ಭಾಂಭ್ರಿ ನಿರ್ಗಮನ

ಐಟಿಎಫ್ ಫ್ಯೂಚರ್ ಓಪನ್: ಯೂಕಿ ಭಾಂಭ್ರಿ ನಿರ್ಗಮನ
ನವದೆಹಲಿ , ಶುಕ್ರವಾರ, 10 ಜೂನ್ 2011 (15:46 IST)
PTI
ಐಟಿಎಫ್ ಫ್ಯೂಚರ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಯೂಕಿ ಭಾಂಭ್ರಿ, ಮಂಡಿನೋವಿನ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ನಿವೃತ್ತಿಯನ್ನು ಘೋಷಿಸಿದ್ದರಿಂದ ಎದುರಾಳಿ ಕರುಣುಡೇ ಸಿಂಗ್ ನೇರವಾಗಿ ಸೆಮಿಫೈನಲ್ ತಲುಪಿದ್ದಾರೆ.

ಪಂದ್ಯದಲ್ಲಿ 4-6 ಪಾಯಿಂಟ್‌ಗಳಿಂದ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದ ನಂತರ ಎರಡನೇ ಸೆಟ್‌ನಲ್ಲಿ 4-3 ಪಾಯಿಂಟ್‌ಗಳಿಂದ ಮುನ್ನಡೆ ಅನುಭವಿಸಿದ್ದರು.ಆದರೆ, ಮಂಡಿನೋವು ಹೆಚ್ಚಳವಾದ ಹಿನ್ನೆಲೆಯಲ್ಲಿ ಪಂದ್ಯದಿಂದ ನಿರ್ಗಮಿಸಬೇಕಾಯಿತು.

ಪಂದ್ಯದ ಆರಂಭದಿಂದಲೂ ಮಂಡಿನೋವಿನ ಸಮಸ್ಯೆಯಿದೆ.ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮೊದಲ ಸೆಟ್‌ನಲ್ಲಿ ಮಂಡಿ ನೋವು ಹೆಚ್ಚಳವಾಗಿದ್ದರಿಂದ ಅನಿವಾರ್ಯವಾಗಿ ಪಂದ್ಯದಿಂದ ಹಿಂದೆ ಸರಿಯಬೇಕಾಯಿತು ಎಂದು ಭಾಂಭ್ರಿ ಹೇಳಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಆಟಗಾರ ವೈಜಯಂತ್ ಮಲಿಕ್, ತಮ್ಮ ಎದುರಾಳಿ ವಿಗ್ನೇಶ್ ಪೆರನಾ ಮುಲ್ಲರ್ ವಿರುದ್ಧ 6-2, 7-5 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.

Share this Story:

Follow Webdunia kannada