Select Your Language

Notifications

webdunia
webdunia
webdunia
webdunia

ಐಟಿಎಫ್‌: ಯೂಕಿ ಭಾಂಭ್ರಿ ಫೈನಲ್ ಹಂತಕ್ಕೆ ಪ್ರವೇಶ

ಐಟಿಎಫ್‌: ಯೂಕಿ ಭಾಂಭ್ರಿ ಫೈನಲ್ ಹಂತಕ್ಕೆ ಪ್ರವೇಶ
ಮುಂಬೈ , ಭಾನುವಾರ, 20 ಮಾರ್ಚ್ 2011 (09:22 IST)
ಫ್ಯೂಚರ್ ಟೆನಿಸ್ ಟೂರ್ನಮೆಂಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ, ಉದಯೋನ್ಮುಖ ಆಟಗಾರ ಯೂಕಿ ಭಾಂಭ್ರಿ ತಮ್ಮ ಅಗ್ರಶ್ರೇಯಾಂಕಿತ ಎದುರಾಳಿ ಗೆರೊ ಕ್ರೆಟ್‌ಶ್ಮರ್ ವಿರುದ್ಧ ಜಯಗಳಿಸಿ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ವಿಶ್ವ ಎಟಿಪಿ ಶ್ರೇಯಾಂಕದಲ್ಲಿ 491 ನೇ ಸ್ಥಾನ ಪಡೆದಿರುವ ಭಾಂಬ್ರಿ, 414ನೇ ಶ್ರೇಯಾಂಕಿತ ರಸ್ತೋಗಿ ವಿರುದ್ಧ ಸುಮಾರು ಎರಡುವರೆ ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 7-6 (7-5), 6-3 ಸೆಟ್‌ಗಳಿಂದ ಗೆಲುವು ಪಡೆದಿದ್ದಾರೆ.

ಭಾಂಭ್ರಿ, ಫೈನಲ್ ಪಂದ್ಯದಲ್ಲಿ ಕ್ರೋಷಿಯಾದ ಆಟಗಾರ ರೊಕೊ ಕರನೂಸಿಕ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ರೊಕೊ ಕರನೂಸಿಕ್, ಸೆಮಿಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ವಿಷ್ಣುವರ್ಧನ್ ವಿರುದ್ಧ 6-4, 6-3 ಸೆಟ್‌ಗಳಿಂದ ಜಯಗಳಿಸಿ ಫೈನಲ್‌ಗೆ ತಲುಪಿದ್ದಾರೆ.

Share this Story:

Follow Webdunia kannada