Select Your Language

Notifications

webdunia
webdunia
webdunia
webdunia

ಐಟಿಎಫ್‌ನಲ್ಲಿ ಭಾರತ ತಂಡದ ಕಳೆಪೆ ಪ್ರದರ್ಶನ

ಐಟಿಎಫ್‌ನಲ್ಲಿ ಭಾರತ ತಂಡದ ಕಳೆಪೆ ಪ್ರದರ್ಶನ
ನವದೆಹಲಿ , ಬುಧವಾರ, 27 ಮೇ 2009 (20:09 IST)
ಐಟಿಎಫ್ ಮಹಿಳಾ ಫ್ಯೂಚರ್ಸ್ ಟೂರ್ನ್‌ಮೆಂಟ್‌ನಲ್ಲಿ (ಐಟಿಎಫ್) ಭಾರತೀಯ ತಂಡದ ಅಗ್ರ ಶ್ರೇಯಾಂಕಿತೆ ಅಂಕಿತಾ ಭಾಂಬ್ರಿ ಸೇರಿದಂತೆ ಪ್ರಮುಖ ಆಟಗಾರರು ಸೋಲಿನೊಂದಿಗೆ ಹೊರಬೀಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಅಂಕಿತಾ ಭಾಂಬ್ರಿ, ಐದನೇ ಶ್ರೇಯಾಂಕದ ಸಹೋದರಿ ಸಾನಾ, ಮೂರನೇ ಶ್ರೇಯಾಂಕದ ಇಷಾ ಲಾಖ್ನಿ ಮತ್ತು ರಶ್ಮಿ ತೆಲ್‌ತುಂಬ್ಡೆ ಕೂಡ ಐಟಿಎಫ್‌ನ ಎರಡನೇ ಸುತ್ತನಲ್ಲಿ ಪರಾಜಯಗೊಳ್ಳುವ ಮೂಲಕ ಹೊರಬಿದ್ದಿದ್ದಾರೆ.

ಅಗ್ರ ಶ್ರೇಯಾಂಕದ ಅಂಕಿತಾ ತನ್ನ ಎದುರಾಳಿ ಚೀನಾದ ಯಿಂಗ್ ಯಿಂಗ್ ದುನ್ 2-6, 3-6 ಪಾಯಿಂಟ್‌ಗಳಿಂದ ಸೋಲನ್ನನುಭವಿಸಿದರು. ಆದರೆ ರುಶ್ಮಿ ಚಕ್ರವರ್ತಿ ಹಾಗೂ ಪರಿಜಾ ಮಾಲೂ ಅವರು ಐಟಿಎಫ್ ಹಣಾಹಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಷಾ ತನ್ನ ಆಸ್ಟ್ರೇಲಿಯಾದ ಎದುರಾಳಿ ರಿನೇ ಬಿನ್ನೈ ಎದುರು 4-6, 0-6ಪಾಯಿಂಟ್‌ಗಳಿಂದ ಪರಾಜಯಗೊಂಡರೆ, ರಶ್ಮಿ ಇಸ್ರೇಲ್‌ನ ಕೆರನ್ ಶ್ಲೂಮೂ ಎದುರು 6-2,6-3ಅಂತರದಲ್ಲಿ ಸೋಲುಂಡರು.

Share this Story:

Follow Webdunia kannada