Webdunia - Bharat's app for daily news and videos

Install App

ಏಷಿಯನ್ ಯೂತ್ ಗೇಮ್ಸ್: ಭಾರತಕ್ಕೆರಡು ಪದಕ

Webdunia
ಮಂಗಳವಾರ, 30 ಜೂನ್ 2009 (20:19 IST)
ಏಷಿಯನ್ ಯೂತ್ ಗೇಮ್ಸ್ ಉದ್ಘಾಟನ ಆವೃತ್ತಿಯ ಆರಂಭಿಕ ದಿನದಂದೇ ಅದ್ಭುತ ಸಾಧನೆ ಮಾಡಿರುವ ಭಾರತೀಯ ಕ್ರೀಡಾಪಟುಗಳು ಒಂದು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಸಿಂಗಾಪುರದಲ್ಲಿ ಇಂದು ಆರಂಭವಾಗಿರುವ ಟೂರ್ನಮೆಂಟ್‌ನ ಡಿಸ್ಕಸ್ ಎಸೆತದಲ್ಲಿ ಅರ್ಜುನ್ ಚಿನ್ನದ ಪದಕ ಹಾಗೂ ಹುಡುಗರ 1500 ಮೀಟರ್ ಓಟದಲ್ಲಿ ರಾಹುಲ್ ಕುಮಾರ್ ಬೆಳ್ಳಿ ಪದಕ ಪಡೆದರು.

18 ರ ಹರೆಯದ ಅರ್ಜುನ್ ಐದನೇ ಮತ್ತು ಅಂತಿಮ ಪ್ರಯತ್ನದಲ್ಲಿ 58.72 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಜಪಾನ್‌ನ ಆಕಿಬಾ ಕೇಂತಾ 51.84 ಮೀಟರ್‌ನೊಂದಿಗೆ ದ್ವಿತೀಯ ಹಾಗೂ ಕಜಕೀಸ್ತಾನದ ಮಿಲೋವಾತ್‌ಸ್ಕೈ ಯೆವ್ಜೆನೀವ್ 51.73 ಮೀಟರ್‌ನೊಂದಿಗೆ ಮೂರನೇ ಸ್ಥಾನ ಪಡೆದರು.

ರಾಹುಲ್ 4.05.01 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಿಟ್ಟಿಸಿದರು. ಅವರಿಗೂ ಮುಂಚೆ ಅಂದರೆ 4.00.91 ನಿಮಿಷದಲ್ಲಿ ಗುರಿ ಮುಟ್ಟಿದ ಯೆಮನ್‌ನ ಲಾಯಹ್ ವಲೀದ್ ಸಲೇಹ್ ಆಲಿಯವರು ಚಿನ್ನ ಹಾಗೂ 4.05.32 ನಿಮಿಷಗಳನ್ನು ತೆಗೆದುಕೊಂಡ ಇರಾನ್‌ನ ಬೆಯ್ರಾನ್ವಾಂದ್ ಅಮೀರ್ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

ಭಾರತದಿಂದ ಅಥ್ಲೆಟಿಕ್ಸ್, ಈಜು, ಡೈವಿಂಗ್, ಶೂಟಿಂಗ್, ಟೇಬಲ್ ಟೆನಿಸ್, ಬೀಚ್ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಸೇರಿದಂತೆ ಒಟ್ಟು ಏಳು ವಿಭಾಗಗಳಿಂದ 48 ಕ್ರೀಡಾಪಟುಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments