Select Your Language

Notifications

webdunia
webdunia
webdunia
webdunia

ಅಬುಧಾಭಿ ಓಪನ್: ಬೆರ್ಡಿಚ್, ಸೊಡೆರ್ಲಿಂಗ್ ಸೆಮಿಫೈನಲ್‌ಗೆ

ಅಬುಧಾಭಿ ಓಪನ್: ಬೆರ್ಡಿಚ್, ಸೊಡೆರ್ಲಿಂಗ್ ಸೆಮಿಫೈನಲ್‌ಗೆ
ಅಬುಧಾಬಿ , ಶುಕ್ರವಾರ, 31 ಡಿಸೆಂಬರ್ 2010 (15:58 IST)
ಅಬುಧಾಭಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಚಾಂಪಿಯನ್‌ಶಿಪ್‌ ಕ್ವಾರ್ಟರ್‌‌ಫೈನಲ್ ಪಂದ್ಯದಲ್ಲಿ, ಥಾಮಸ್ ಬೆರ್ಡಿಚ್ ತಮ್ಮ ಎದುರಾಳಿ ಮಾರ್ಕೊಸ್ ಬಘಾದತಿಸ್ ವಿರುದ್ಧ 6-3, 3-6, 7-5 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ.

ಥಾಮಸ್ ಬೆರ್ಡಿಚ್ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ರಫೆಲ್ ನಡಾಲ್‌ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ರೊಬಿನ್ ಸೊಡೆರ್ಲಿಂಗ್, ತಮ್ಮ ಎದುರಾಳಿ ಜೊ-ವಿಲ್‌ಫ್ರೈಡ್ ತ್ಸೊಂಗಾ ವಿರುದ್ಧ 6-4, 6-7 (5), 6-1 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ರೊಬಿನ್ ಸೊಡೆರ್ಲಿಂಗ್, ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಎರಡನೇ ಅಗ್ರಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಗೆಲುವು ನನ್ನದಾಗಿದೆ. ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ನಡಾಲ್ ಅವರನ್ನು ಎದುರಿಸುವುದು ಸುಲಭ ಸಾಧ್ಯವಲ್ಲ ಎಂದು ಬೆರ್ಡಿಚ್ ಪಂದ್ಯದ ಗೆಲುವಿನ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Share this Story:

Follow Webdunia kannada