Webdunia - Bharat's app for daily news and videos

Install App

ವಿಂಬಲ್ಡನ್‌: ಭಾರತೀಯರ ಜೂ. ಹೋರಾಟ ಅಂತ್ಯ

Webdunia
ಮಂಗಳವಾರ, 30 ಜೂನ್ 2009 (20:46 IST)
ಆಸ್ಟ್ರೇಲಿಯಾದ ಬೆರ್ನಾರ್ಡ್ ತೊಮಿಕ್‌ರೆದುರು ನೇರ ಸೆಟ್‍‌ಗಳ ಅಂತರದಿಂದ ಸುದರ್ವಾ ಸೀತಾರಾಮ್ ಪರಾಜಯ ಹೊಂದುವ ಮೂಲಕ ವಿಂಬಲ್ಡನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಶ್ರೇಯಾಂಕರಹಿತ ಭಾರತೀಯ ಆಟಗಾರ ಎರಡನೇ ಸುತ್ತಿನ ಪಂದ್ಯದಲ್ಲಿ 2-6, 2-6ರಿಂದ ಕೇವಲ 42 ನಿಮಿಷಗಳಲ್ಲಿ ಎದುರಾಳಿಗೆ ಶರಣಾದರು.

ಭಾರತೀಯ ಆಟಗಾರ ಯಾವುದೇ ರೀತಿಯಲ್ಲೂ ಎದುರಾಳಿ ಆಟಗಾರನಿಗೆ ಸಮಾನ ಎಂಬಂತೆ ಆಟವನ್ನು ತೋರಿಸಲೇ ಇಲ್ಲ. ಆರಂಭಿಕ ಸೆಟ್‌ನಲ್ಲಿ ಎರಡು ಬಾರಿ ಹಾಗೂ ಕೊನೆಯ ಸೆಟ್‌ನಲ್ಲಿ ಮೂರು ಬಾರಿ ಬ್ರೇಕ್ ಮಾಡುವ ಮೂಲಕ ಸೀತಾರಾಮ್‌ರನ್ನು ಅವರು ಸೋಲಿನಂಚಿಗೆ ತಳ್ಳಿದರು.

ಸೀತಾರಾಮ್ ನಾಲ್ಕು ಡಬಲ್ ಫಾಲ್ಟ್‌ಗಳನ್ನೆಸಗಿದರೆ ಎದುರಾಳಿ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಚಾಂಪಿಯನ್ ತಪ್ಪುಗಳನ್ನೆಸಗದೆ ಅದ್ಭುತ ಆಟ ಪ್ರದರ್ಶಿಸಿದ್ದಾರೆ.

ಬಾಲಕರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಸೀತಾರಾಮ್ ಈಜಿಪ್ಟ್‌ನ ಕರೀಮ್ ಮೊಹಮ್ಮದ್ ಮಾಮೌನ್‌ರನ್ನು 6-3, 4-6, 6-2ರಿಂದ ಸೋಲಿಸಿದ್ದರು.

ಸೀತಾರಾಮ್ ಎರಡನೇ ಸುತ್ತಿನ ಪಂದ್ಯದಲ್ಲಿ ಒಂದೇ ಒಂದು ಬ್ರೇಕ್ ಮಾಡಿದ್ದೆಂದರೆ ಎರಡನೇ ಸೆಟ್‌ನಲ್ಲಿ. ಈ ವರ್ಷದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಯೂಕಿ ಭಾಂಬ್ರಿ ಐಟಿಎಫ್ ಫ್ಯೂಚರ್ಸ್ ಟೂರ್ನಮೆಂಟ್‌ಗಳತ್ತ ರ‌್ಯಾಂಕಿಂಗ್ ಹೆಚ್ಚಿಸಿಕೊಳ್ಳುವ ಸಲುವಾಗಿ ಗಮನ ಹರಿಸುತ್ತಿರುವ ಕಾರಣ ಭಾರತದ ಪರವಾಗಿ ಅವರು ಜೂನಿಯರ್ ವಿಭಾಗದಲ್ಲಿ ಆಡದೇ ಇದ್ದದ್ದು ಹಿನ್ನಡೆ ಎಂದೇ ಭಾವಿಸಲಾಗಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments