Select Your Language

Notifications

webdunia
webdunia
webdunia
webdunia

ಇಂದಿನಿಂದ ಶಾಸ್ತ್ರೀ ಹಾಕಿ ಟೂರ್ನಮೆಂಟ್‌‌ ಪ್ರಾರಂಭ

ಇಂದಿನಿಂದ ಶಾಸ್ತ್ರೀ ಹಾಕಿ ಟೂರ್ನಮೆಂಟ್‌‌ ಪ್ರಾರಂಭ
, ಶನಿವಾರ, 28 ಡಿಸೆಂಬರ್ 2013 (15:25 IST)
PR
ನವದೆಹಲಿ: ಇಂದಿನಿಂದ 24ನೇ ಲಾಲ್ ಬಹದ್ದೂರ್ ಶಾಸ್ತ್ರೀ ಪುರುಷ ಹಾಕಿ ಟೂರ್ನಮೆಂಟ್‌‌ ಪ್ರಾರಂಭವಾಗಲಿದೆ. ಈ ಪಂದ್ಯಾವಳಿ ಜನೆವರಿ ಮೂರರವರೆಗೆ ದೆಹಲಿಯ ಶಿವಾಜಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ.

ವಿಜೇತ ತಂಡಕ್ಕೆ 2 ಲಕ್ಷ ರೂಪಾಯಿ ಬಹುಮಾನ ಮತ್ತು ಎರಡನೇ ತಂಡಕ್ಕೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಟೂರ್ನಮೆಂಟನ್‌ನ ಆಯೋಜನ ಸಮಿತಿಯ ಅಧ್ಯಕ್ಷ ಕಮಲ ಚೌಧರಿ ಮಾಧ್ಯಮದವರೋಂದಿಗೆ ಮಾತನಾಡುವಾಗಿ ಈ ವಿಷಯ ತಿಳಿಸಿದ್ದಾರೆ

ಈ ಟೂರ್ನಮೆಂಟ್‌ನಲ್ಲಿ ಓಎನ್‌ಜಿಸಿ, ಇಂಡಿಯನ್‌ ಆಯಿಲ್‌, ಬಿಪಿಸಿಎಲ್‌, ವಾಯುಸೇನಾ, ಪಿಎನ್‌ಬಿ, ಸಿಆರ್‌ಪಿಎಫ್‌‌, ಆರ್‌ಸಿಫ್‌‌ ಮತ್ತು ಜೆಬಿ ಹಾಕಿ ಅಕಾಡೆಮಿ ತಂಡಗಳು ಭಾಗವಹಿಸಲಿವೆ ಎಂದು ಚೌಧರಿ ತಿಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಎರ್‌ ಇಂಡಿಯಾ ಪ್ರಶಸ್ತಿ ಪಡೆದಿತ್ತು. ಬಿಪಿಸಿಎಲ್‌ ರನ್ನ್‌ರ ತಂಡವಾಗಿತ್ತು.

Share this Story:

Follow Webdunia kannada