Webdunia - Bharat's app for daily news and videos

Install App

ಬ್ಯಾಂಕ್ ಆಫ್ ಇಂಗ್ಲೆಂಡ್ ರೆಪೋ ಕಡಿತ: ಗಗನಕ್ಕೇರಿದ ಶೇರುಪೇಟೆ ಸೂಚ್ಯಂಕ

Webdunia
ಶುಕ್ರವಾರ, 5 ಆಗಸ್ಟ್ 2016 (20:25 IST)
ಬ್ಯಾಂಕ್ ಆಫ್ ಇಂಗ್ಲೆಂಡ್ ರೆಪೋ ದರ ಕಡಿತ ಮತ್ತು ಆರ್ಥಿಕ ನೀತಿ ಸರಳಿಕರಣ ಘೋಷಿಸುತ್ತಿದ್ದಂತೆ ದೇಶಿಯ ಶೇರುಪೇಟೆ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 364 ಪಾಯಿಂಟ್‌ಗಳ ಭರ್ಜರಿ ಚೇತರಿಕೆ ಕಂಡಿದೆ.
 
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟು ಮತ್ತು ತೈಲ ಹಾಗೂ ಅನಿಲ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಭಾರಿ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ಹಿಂದಿನ ದಿನದ ತೊಳಲಾಟದ ವಹಿವಾಟಿನ ಮುಕ್ತಾಯಕ್ಕೆ 16.86 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 363.98 ಪಾಯಿಂಟ್‌ಗಳ ಏರಿಕೆ ಕಂಡು 28,078.35 ಅಂಕಗಳಿಗೆ ತಲುಪಿದೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ  132.05 ಪಾಯಿಂಟ್‌ಗಳ ಏರಿಕೆ ಕಂಡು 8,683.15 ಅಂಕಗಳಿಗೆ ತಲುಪಿದೆ. 
 
ಹೀರೋ ಮೋಟಾರ್ ಕಾರ್ಪೋರೇಶನ್, ಬಜಾಜ್ ಅಟೋ  ಚೇತರಿಕೆ ಕಂಡರೆ, ಸನ್‌ಫಾರ್ಮಾ ಮತ್ತು ಪವರ್ ಗ್ರಿಡ್ ವಹಿವಾಟಿನಲ್ಲಿ ಭಾರಿ ನಷ್ಟ ಅನುಭವಿಸಿದವು.
 
ಎಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಎಸ್‌ಬಿಐ, ಎಂಆಂಡ್‌ಎಂ, ಎಲ್‌ಆಂಡ್‌ಟಿ ಮತ್ತು ಆದಾನಿ ಪೋರ್ಟ್ಸ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಭೀಷ್ಮ ಅಡ್ವಾಣಿ ದಾಖಲೆ ಮುರಿದ ಚಾಣಾಕ್ಷ ಅಮಿತ್‌ ಶಾ: ಗೃಹ ಸಚಿವರನ್ನು ಕೊಂಡಾಡಿದ ಮೋದಿ

ನಮ್ಗೆ ಹೇಳುವ ನೀವು ಪಾಕಿಸ್ತಾನಕ್ಕೆ ಸಹಾಯ ಮಾಡ್ತಿಲ್ವಾ: ಅಮೆರಿಕಾಗೆ ಟಾಂಗ್ ಕೊಟ್ಟ ಭಾರತ

ಸರಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಪರಿಹಾರ ಕೊಡಿ: ಬಿ.ವೈ.ವಿಜಯೇಂದ್ರ

ಪಾಪರ್ ಸರ್ಕಾರ ಇನ್ನೆಷ್ಟು ದಿನ ಸಹಿಸಬೇಕು: ಆರ್ ಅಶೋಕ್ ವಾಗ್ದಾಳಿ

ಮನುಷ್ಯನ ಎಲ್ಲಾ ಖಾಯಿಲೆಗಳಿಗೆ ಇದೊಂದೇ ಔಷಧ ಸಾಕು ಅಂತಾರೆ ಡಾ ಸಿಎನ್ ಮಂಜುನಾಥ್

ಮುಂದಿನ ಸುದ್ದಿ
Show comments