ಕೈಗಾರಿಕೆ ವೃದ್ಧಿ ದರ ಸೂಚ್ಯಂಕ ಕುಸಿತ: ಸೆನ್ಸೆಕ್ಸ್ ಇಳಿಕೆ

Webdunia
ಮಂಗಳವಾರ, 16 ಆಗಸ್ಟ್ 2016 (20:12 IST)
ಕೈಗಾರಿಕೆ ವೃದ್ಧಿ ದರ ಸೂಚ್ಯಂಕ ಕುಸಿತ ಕಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 88 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 377.52 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 87.79 ಪಾಯಿಂಟ್‌ಗಳ ಇಳಿಕೆ ಕಂಡು 28,190.04 ಅಂಕಗಳಿಗೆ ತಲುಪಿದೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 29.60 ಪಾಯಿಂಟ್‌ಗಳ ಕುಸಿತ ಕಂಡು 8,642.55 ಅಂಕಗಳಿಗೆ ತಲುಪಿದೆ.
 
ಚೀನಾ, ಹಾಂಗ್‌ಕಾಂಗ್‌, ಸಿಂಗಾಪೂರ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಶೇರುಪೇಟೆಗಳು ವಹಿವಾಟಿನ ಮುಕ್ತಾಯಕ್ಕೆ ಶೇ.0.09 ರಿಂದ ಶೇ.0.49 ರಷ್ಟು ಕುಸಿತ ಕಂಡಿದೆ.
 
ಸನ್‌ ಫಾರ್ಮಾ, ಟಾಟಾ ಮೋಟಾರ್ಸ್, ಟಿಸಿಎಸ್, ವಿಪ್ರೋ, ಎಚ್‌ಡಿಎಫ್‌ಸಿ, ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಮಾರುತಿ, ಆರ್‌ಐಎಲ್ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ. 
 
ಏತನ್ಮಧ್ಯೆ, ಸಿಪ್ಲಾ, ಆದಾನಿ ಪೋರ್ಟ್ಸ್, ಎಸ್‌ಬಿಐ, ಟಾಟಾ ಸ್ಟೀಲ್, ಎಲ್‌ಆಂಡ್‌ಟಿ, ಐಸಿಐಸಿಐ ಬ್ಯಾಂಕ್ ಮತ್ತು ಓಎನ್‌ಜಿಸಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಹೆಚ್ಚುತ್ತಿರುವ ಚಿರತೆ ಓಡಾಟ, ಜನರಲ್ಲಿ ಆತಂಕ

ದಿ ಕೇರಳ ಸಿನಿಮಾಗೆ ತಡೆ, ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಸ್ಫೋಟಕ ಹೇಳಿಕೆ

ಕೊನೆಗೂ ಬೆಂಗಳೂರು ಕರಗ ಉತ್ಸವಕ್ಕೆ ಮುಹೂರ್ತ ಫಿಕ್ಸ್‌

ಕುಮಾರಸ್ವಾಮಿಯೇ ಮುಂದಿನ ಸಿಎಂ ಎಂದ ನಿಖಿಲ್ ಕುಮಾರಸ್ವಾಮಿಗೆ ಆರ್ ಅಶೋಕ್ ಪ್ರತಿಕ್ರಿಯೆ ಹೀಗಿತ್ತು

ಉದ್ಯೋಗಾಕಾಂಕ್ಷಿ ಯುವಜನರ ಕಿವಿಗೆ ಚೆಂಡು ಹೂವು: ಎ. ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments