Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್ : ಪಾತಾಳಕ್ಕೆ ಕುಸಿದ ಶೇರುಪೇಟೆ ಸಂವೇದಿ ಸೂಚ್ಯಂಕ

ಸೆನ್ಸೆಕ್ಸ್ : ಪಾತಾಳಕ್ಕೆ ಕುಸಿದ ಶೇರುಪೇಟೆ ಸಂವೇದಿ ಸೂಚ್ಯಂಕ
ಮುಂಬೈ , ಗುರುವಾರ, 26 ಮಾರ್ಚ್ 2015 (18:48 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟು, ಮಾಸಾಂತ್ಯದಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನ ಮುಕ್ತಾಯಕ್ಕೆ 650 ಪಾಯಿಂಟ್‌ಗಳ ಭಾರಿ ಕುಸಿತದೊಂದಿಗೆ ಅಂತ್ಯವಾಗಿದೆ.

ಕಳೆದ ಆರು ದಿನಗಳ ವಹಿವಾಟಿನ ಮುಕ್ತಾಯಕ್ಕೆ 624.55 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 654.25 ಪಾಯಿಂಟ್‌ಗಳ ಕುಸಿತ ಕಂಡು 27,457.58 ಅಂಕಗಳಿಗೆ ತಲುಪಿದೆ.

ಐಟಿ, ಬ್ಯಾಂಕಿಂಗ್, ಉಕ್ಕು ಮತ್ತು ಹೆಲ್ತ್‌ಕೇರ್ ಕ್ಷೇತ್ರದ ಶೇರುಗಳ ಲಾಭದಾಯಕ ವಹಿವಾಟಿಗೆ ಹೂಡಿಕೆದಾರರು ಮೊರೆಹೋಗಿದ್ದರಿಂದ ಇತರ ಕ್ಷೇತ್ರದ ಸೇರುಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 188.65 ಪಾಯಿಂಟ್‌ಗಳ ಏರಿಕೆಯಾಗಿ 8342.15 ಅಂಕಗಳಿಗೆ ತಲುಪಿದೆ.

Share this Story:

Follow Webdunia kannada