Select Your Language

Notifications

webdunia
webdunia
webdunia
webdunia

ದುರ್ಬಲ ವಹಿವಾಟು: ಕುಸಿದ ಶೇರುಪೇಟೆ ಸೂಚ್ಯಂಕ

ದುರ್ಬಲ ವಹಿವಾಟು: ಕುಸಿದ ಶೇರುಪೇಟೆ ಸೂಚ್ಯಂಕ
ಮುಂಬೈ , ಗುರುವಾರ, 26 ಮಾರ್ಚ್ 2015 (15:09 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟು ಮತ್ತು ಮಾಸಾಂತ್ಯದಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 215 ಪಾಯಿಂಟ್‌ಗಳಿಗೆ ಮುಗ್ಗರಿಸಿದೆ.

ಕಳೆದ ಆರು ದಿನಗಳ ವಹಿವಾಟಿನಲ್ಲಿ 624.55 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 215 ಪಾಯಿಂಟ್‌ಗಳ ಕುಸಿತ ಕಂಡು 27,896.80 ಅಂಕಗಳಿಗೆ ತಲುಪಿದೆ.

ವಾಹನೋದ್ಯಮ, ಬಂಡವಾಳ ವಸ್ತುಗಳು, ಗೃಹೋಪಕರಣ ವಸ್ತುಗಳು , ಉಕ್ಕು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 65.90 ಪಾಯಿಂಟ್‌ಗಳ ಕುಸಿತ ಕಂಡು 8464.90 ಅಂಕಗಳಿಗೆ ತಲುಪಿದೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.35 ರಷ್ಟು ಇಳಿಕೆ ಕಂಡಿದೆ. ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಶೇ. 1.57 ರಷ್ಟು ಕುಸಿತ ಕಂಡಿದೆ.

Share this Story:

Follow Webdunia kannada