ಸೆನ್ಸೆಕ್ಸ್: ಅಲ್ಪ ಕುಸಿತ ಕಂಡ ಶೇರುಪೇಟೆ ಸಂವೇದಿ ಸೂಚ್ಯಂಕ

Webdunia
ಗುರುವಾರ, 21 ಜುಲೈ 2016 (18:08 IST)
ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 14 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡಿದೆ.
 
ಏಷ್ಯಾ ಮಾರುಕಟ್ಟೆಗಳ ಮಿಶ್ರ ವಹಿವಾಟು, ಐಟಿ, ಬ್ಯಾಂಕ್, ಬಂಡವಾಳ ವಸ್ತುಗಳು, ಉಕ್ಕು ಮತ್ತು ತಂತ್ರಜ್ಞಾನ ಕ್ಷೇತ್ರಗಳ ಶೇರುಗಳ ಖರೀದಿಗೆ ಹೂಡಿಕೆದಾರರು ನಿರಾಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆ ಡೀಲರ್‌ಗಳು ತಿಳಿಸಿದ್ದಾರೆ.
 
ಎಚ್‌‍ಡಿಎಫ್‌ಸಿ ಬ್ಯಾಂಕ್, ಹಿಂಡಾಲ್ಕೋ, ಐಟಿಸಿ ಮತ್ತು ಕೋಟಾಕ್ ಮಹೇಂದ್ರ ಬ್ಯಾಂಕ್ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಶೇರುಗಳ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಏತನ್ಮಧ್ಯೆ, ತೈಲ ಮತ್ತು ಅನಿಲ, ರಿಯಲ್ಟಿ, ಹೆಲ್ತ್‌ಕೇರ್, ವಾಹನೋದ್ಯಮ ಮತ್ತು ಇಂಧನ ಕ್ಷೇತ್ರಗಕಳ ಶೇರುಗಳ ಖರೀದಿಗೆ ಹಬಡಿಕೆದಾರರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 12.18 ಪಾಯಿಂಟ್‌ಗಳ ಕುಸಿತ ಕಂಡು 27,980.07 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 2.55 ಪಾಯಿಂಟ್‌ಗಳ ಏರಿಕೆ ಕಂಡು 8,568.40 ಅಂಕಗಳಿಗೆ ತಲುಪಿದೆ.
 
ಎಕ್ಸಿಸ್ ಬ್ಯಾಂಕ್, ಡಾ.ರೆಡ್ಡಿ ಲ್ಯಾಬ್, ವಿದ್ಯುತ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಸ್ಟೀಲ್ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ. 
 
ಗಮನಾರ್ಹ ವಿಷಯವೆಂದರೆ ಸಿಪ್ಲಾ, ಬಜಾಜ್, ಸನ್‌ ಫಾರ್ಮಾ, ಓಎನ್‌ಜಿಸಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮಮತಾ ಬ್ಯಾನರ್ಜಿ

ಮಧ್ಯಪ್ರಾಚ್ಯ ಸಂಘರ್ಷ: ಯಾವುದೇ ಇಂಧನ ಕೊರತೆಯಿಲ್ಲ

ಸುಧಾಕರ್ ಆರೋಗ್ಯದ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ

ಮದುವೆ ನೆಪದಲ್ಲಿ ಯುವತಿಗೆ ದೋಖಾ: ಮಗು, ಸಂತ್ರಸ್ತೆ ಪಾಲನೆಗೆ ಕೃಷ್ಣ ಜೆ ರಾವ್‌ ಎಷ್ಟು ಹಣ ನೀಡಬೇಕು ಗೊತ್ತಾ

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಮುಂದಿನ ಸುದ್ದಿ
Show comments