ಆರ್‌ಬಿಐಗೆ ಉರ್ಜಿತ್ ಪಟೇಲ್ ನೇಮಕ: ಚೇತರಿಕೆ ಕಂಡ ಶೇರುಸೂಚ್ಯಂಕ

Webdunia
ಸೋಮವಾರ, 22 ಆಗಸ್ಟ್ 2016 (14:29 IST)
ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಉರ್ಜಿತ್ ಪಟೇಲ್ ಅವರನ್ನು ಗವರ್ನರ್ ಆಗಿ ನೇಮಕಗೊಂಡಿದ್ದರಿಂದ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 58 ಪಾಯಿಂಟ್‌ಗಳ ಏರಿಕೆ ಕಂಡಿದೆ. 
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 46.44 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 57.53 ಪಾಯಿಂಟ್‌ಗಳ ಚೇತರಿಕೆ ಕಂಡು 28,134.53 ಅಂಕಗಳಿಗೆ ತಲುಪಿದೆ.
 
ತೈಲ ಮತ್ತು ಅನಿಲ, ಬ್ಯಾಂಕಿಂಗ್, ರಿಯಲ್ಟಿ, ವಿದ್ಯುತ್, ಎಫ್‌ಎಂಸಿಜಿ, ಪಿಎಸ್‌ಯು ಮತ್ತು ಬಂಡವಾಳ ವಸ್ತುಗಳ ಕ್ಷೇತ್ರಗಳ ಶೇರುಗಳು ಲಾಭದತ್ತ ಸಾಗಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 17.95 ಪಾಯಿಂಟ್‌ಗಳ ಏರಿಕೆ ಕಂಡು 8,684.85 ಅಂಕಗಳಿಗೆ ತಲುಪಿದೆ. 
 
ಏಷ್ಯಾ ಮಾರುಕಟ್ಟೆಗಳಾದ ಜಪಾನ್‌ನ ನಿಕೈ ಶೇ.0.24 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.58 ರಷ್ಟು ಕುಸಿತ ಕಂಡಿದೆ. ಶಾಂಘೈ ಶೇರುಸೂಚ್ಯಂಕ ಕೂಡಾ ಶೇ0.62 ರಷ್ಟು ಕುಸಿತ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.24 ರಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹನಿಮೂನ್ ಹತ್ಯೆ ಪ್ರಕರಣದ ಆರೋಪಿ ಸೋನಮ್ ರಘುವಂಶಿಗೆ ಸುಪ್ರೀಂ ಕೋರ್ಟ್‌ ಬಿಗ್‌ಶಾಕ್‌

ಆಸ್ತಿಗಾಗಿ ಇಂಥಾ ನೀಚ ಕೆಲಸ ಮಾಡೋದಾ... ಅತ್ತೆಯನ್ನು ದರ ದರ ಎಳೆದು ತಂದು ಖತರ್ನಾಕ್ ಕೆಲಸ ಮಾಡಿದ ಮಹಿಳೆ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ, ಗೂಂಡಾ ಸಂಸ್ಕೃತಿ ಎಂದು ಟೀಕೆ

ವಿದ್ಯಾರ್ಥಿಗಳಿಗೆ ಯಾಕೆ ಲಾಠಿ ಏಟು ಕೊಟ್ರಿ: ಪ್ರಧಾನಿ ಮೋದಿ ಟ್ವೀಟ್ ಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

ಮುಂದಿನ ಸುದ್ದಿ
Show comments