Webdunia - Bharat's app for daily news and videos

Install App

ಕೊನೆಗೂ ಚೇತರಿಕೆ ಕಂಡ ಶೇರುಪೇಟೆ ಸಂವೇದಿ ಸೂಚ್ಯಂಕ

Webdunia
ಗುರುವಾರ, 4 ಆಗಸ್ಟ್ 2016 (18:33 IST)
ಸತತ ನಾಲ್ಕು ದಿನಗಳ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಶೇರುಪೇಟೆ ಸೂಚ್ಯಂಕ, ಜಿಎಸ್‌‌ಟ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಶೇರುಪೇಟೆ ಸೂಚ್ಯಂಕ ಚೇತರಿಕೆ ಕಂಡಿದೆ.
 
ಕಳೆದ ನಾಲ್ಕು ದಿನಗಳ ವಹಿವಾಟಿನ ಮುಕ್ತಾಯಕ್ಕೆ 511.11 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ  ವಹಿವಾಟಿನ ಮುಕ್ತಾಯಕ್ಕೆ 224 ಪಾಯಿಂಟ್‌ಗಳ ಏರಿಕೆ ಕಂಡು 27,714.37 ಅಂಕಗಳಿಗೆ ತಲುಪಿದೆ.   
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 6.25 ಪಾಯಿಂಟ್‌ಗಳ ಚೇತರಿಕೆ ಕಂಡು 8,551.10 ಅಂಕಗಳಿಗೆ ತಲುಪಿದೆ.
 
ಟಾಟಾ ಮೋಟಾರ್ಸ್, ಹೀರೋ ಮೋಟಾರ್ ಕಾರ್ಪೋರೇಶನ್, ಬಜಾಜ್ ಅಟೋ ಮತ್ತು ಮಾರುತಿ ಸುಜುಕಿ ಶೇರುಗಳು ವಹಿವಾಟಿನಲ್ಲಿ ಲಾಭ ಕಂಡಿವೆ.
 
ಇತರ ಏಷ್ಯಾ ಶೇರುಪೇಟೆಗಳಾದ ಜಪಾನ್‌ನ ನಿಕೈ ಶೇ.1.07 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಕೂಡಾ ಶೇ.0.43 ರಷ್ಟು ಚೇತರಿಕೆಯಾಗಿದೆ. ಶಾಂಘೈ ಶೇರುಪೇಟೆ ಕೂಡಾ ಶೇ.0.13 ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾದಯಾತ್ರೆ ಆರಂಭಿಸಿದ ಬಳಿಕ, ಡಿಕೆ ಶಿವಕುಮಾರ್ ಉತ್ತರ ಕರ್ನಾಟಕದತ್ತ ಮುಖ: ವಿಜಯೇಂದ್ರ

ವಿಟ್ಲಪಿಂಡಿ ಉತ್ಸವದ ವೇಳೆ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ, ಭಕ್ತರಲ್ಲಿ ಆತಂಕ

ದೆಹಲಿ ಕಟ್ಟಡ ದುರಂತ, ಹಲವರು ಸಿಲುಕಿರುವ ಶಂಕೆ, ಇಬ್ಬರ ರಕ್ಷಣೆ

ಮಂಗಳೂರಿನಲ್ಲಿ 6ತಿಂಗಳ ಹಿಂದಿನ ಮಾಂಸ ಪತ್ತೆ ಬೆನ್ನಲ್ಲೇ ಕೆಎಫ್‌ಸಿಯ ಡೀಪ್ ಪ್ರೈಡ್ ಚಿಕನ್‌ನಲ್ಲಿ ಹುಳ, Video

ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕಲು ಪ್ರಧಾನಿ ಮೋದಿ ಯತ್ನಿ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಮುಂದಿನ ಸುದ್ದಿ
Show comments