Webdunia - Bharat's app for daily news and videos

Install App

ಸೆನ್ಸೆಕ್ಸ್ 546 ಅಂಕ ಏರಿಕೆ: ಮೊದಲ ಬಾರಿ 54,000 ಗಡಿ ದಾಟಿ ದಾಖಲೆ!

Webdunia
ಗುರುವಾರ, 5 ಆಗಸ್ಟ್ 2021 (08:15 IST)
ಮುಂಬೈ(ಆ.05): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ 546 ಅಂಕಗಳ ಏರಿಕೆ ಕಂಡು 53,369 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್ 54000 ಅಂಕಗಳ ಗಡಿ ದಾಟಿದ್ದು ಇದೆ ಮೊದಲು. ಮತ್ತೊಂದೆಡೆ ನಿಫ್ಟಿಕೂಡಾ 128 ಅಂಕ ಏರಿಕೆ ಕಂಡು 16246ರಲ್ಲಿ ಮುಕ್ತಾಯವಾಯಿತು.

ಇದು ಕೂಡಾ ನಿಫ್ಟಿಯ ಸಾರ್ವಕಾಲಿಕ ಮುಕ್ತಾಯದ ದಾಖಲೆಯಾಗಿದೆ.
ಜಾಗತಿಕ ಬೆಳವಣಿಗೆಗಳ ಜೊತೆಗೆ ಎಸ್ಬಿಐ, ಎಚ್ಡಿಎಫ್ಸಿ ಸೇರಿದಂತೆ ಬ್ಯಾಂಕಿಂಗ್ ವಲಯದ ಉತ್ತಮ ಸಾಧನೆ ಸೆನ್ಸೆಕ್ಸ್ ಅನ್ನು ಸತತ 3 ದಿನಗಳಿಂದ ಏರು ಮುಖದಲ್ಲಿ ಕೊಂಡೊಯ್ದಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿರುವ 30 ಕಂಪನಿಗಳ ಪೈಕಿ 14 ಕಂಪನಿಗಳ ಷೇರು ಬುಧವಾರ ಏರಿಕೆ ಕಂಡರೆ, 16 ಇಳಿಮುಖವಾದವು. ಆದರೂ ಒಟ್ಟಾರೆ ಸೆನ್ಸೆಕ್ಸ್ ಉತ್ತಮ ಏರಿಕೆಯೊಂದಿಗೇ ಮುಕ್ತಾಯವಾಯಿತು.
2021ರ ಜ.21ರಂದು ಮೊದಲ ಬಾರಿ ಸೆನ್ಸೆಕ್ಸ್ 50000 ಅಂಕಗಳ ಗಡಿ ದಾಟಿತ್ತು. ಫೆ.3ರಂದು ಮೊದಲ ಬಾರಿಗೆ 50000 ಅಂಕಗಳ ಮೇಲೇ ಮುಕ್ತಾಯವಾಗಿತ್ತು. ಬಳಿಕ ಫೆ.8ರಂದು 51000, ಫೆ.15ರಂದು 52000, ಜು.7ರಂದು 53000 ಅಂಕಗಳ ಮೇಲೇ ಮುಕ್ತಾಯವಾಗಿತ್ತು. ಈ ವರ್ಷ ಇದುವರೆಗೆ ಸೆನ್ಸೆಕ್ಸ್ ಒಟ್ಟಾರೆ ಶೇ.13.86ರಷ್ಟುಏರಿಕೆ ಕಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರದ ವಿರುದ್ಧ ಕೆಎಸ್ಆರ್ ಟಿಸಿ, ಬಿಎಂಟಿಸಿ ಸಮರ: ಈ ದಿನದಿಂದ ರಸ್ತೆಗಿಳಿಯಲ್ಲ ಬಸ್

ರಾಹುಲ್ ಗಾಂಧಿ ಮತಕಳ್ಳತನದ ಪ್ರತಿಭಟನೆ ಯಾವಾಗ ಡಿಕೆ ಶಿವಕುಮಾರ್ ಹೇಳಿದ್ದೇನು

ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ: ಡಿಕೆ ಶಿವಕುಮಾರ್

Karnataka Weather: ಇಂದಿನಿಂದ ಹವಾಮಾನದಲ್ಲಿ ಈ ಮಹತ್ವದ ಬದಲಾವಣೆ ತಪ್ಪದೇ ಗಮನಿಸಿ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಮುಂದಿನ ಸುದ್ದಿ
Show comments