ಮಾಸಾಂತ್ಯದ ಹಿನ್ನೆಲೆಯಲ್ಲಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 152 ಪಾಯಿಂಟ್ಗಳ ಏರಿಕೆ ಕಂಡಿದೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳು, ವಿದ್ಯುತ್, ಮೂಲಸೌಕರ್ಯ, ವಾಹನೋದ್ಯಮ ಮತ್ತು ಆರೋಗ್ಯ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
ಹಿಂದಿನ ದಿನದ ತೊಳಲಾಟದ ವಹಿವಾಟಿನ ಮುಕ್ತಾಯಕ್ಕೆ 11.86 ಪಾಯಿಂಟ್ಗಳ ಕುಸಿತ ಕಂಡಿದ್ದ ಬಿಎಸ್ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 152.74 ಪಾಯಿಂಟ್ಗಳ ಇಳಿಕೆ ಕಂಡು 29,406.44 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 52.80 ಪಾಯಿಂಟ್ಗಳ ಕುಸಿತ ಕಂಡು 8891.50 ಅಂಕಗಳಿಗೆ ತಲುಪಿದೆ.
ಹಾಂಗ್ಕಾಂಗ್ನ ಹಾಂಗ್ಸೆಂಗ್ ಸೂಚ್ಯಂಕ ಶೇ.1.08 ರಷ್ಟು ಇಳಿಕೆಯಾಗಿದೆ.ಜಪಾನ್ನ ನಿಕೈ ಸೂಚ್ಯಂಕ ಶೇ.0.09 ರಷ್ಟು ಕುಸಿತ ಕಂಡಿದೆ.