Select Your Language

Notifications

webdunia
webdunia
webdunia
webdunia

ಭರ್ಜರಿ ವಹಿವಾಟು: 400 ಪಾಯಿಂಟ್‌ಗಳ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಭರ್ಜರಿ ವಹಿವಾಟು: 400 ಪಾಯಿಂಟ್‌ಗಳ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ
ಮುಂಬೈ , ಸೋಮವಾರ, 5 ಅಕ್ಟೋಬರ್ 2015 (14:51 IST)
ಏಷ್ಯಾ ಶೇರುಪೇಟೆಗಳ ಚೇತರಿಕೆಯ ವಹಿವಾಟಿನ ಪ್ರಭಾವ ದೇಶಿಯ ಶೇರುಪೇಟೆಯ ಮೇಲೆ ಬೀರಿದ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 399 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.
 
ಬಂಡವಾಳ ವಸ್ತುಗಳು, ಬ್ಯಾಂಕಿಂಗ್, ವಾಹನೋದ್ಯಮ ಮತ್ತು ವಿದ್ಯುತ್ ಕ್ಷೇತ್ರದ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 399.27 ಪಾಯಿಂಟ್‌ಗಳ ಏರಿಕೆಯಾಗಿ 26,620.22 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 111.95 ಪಾಯಿಂಟ್‌ಗಳ ಏರಿಕೆಯಾಗಿ 8,062.85 ಅಂಕಗಳಿಗೆ ತಲುಪಿದೆ.
 
ಟಾಟಾ ಮೋಟಾರ್ಸ್ , ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಲಾರ್ಸನ್ ಆಂಡ್ ಟೌಬ್ರೋ, ಟಿಸಿಎಸ್, ಟಾಟಾ ಸ್ಟೀಲ್ ಮತ್ತು ಹೀರೋ ಮೋಟಾರ್ ಕಾರ್ಪೋರೇಶನ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಹಾಂಗ್‌ಸೆಂಗ್, ನಿಕೈ ಮತ್ತು ತೈವಾನ್ ಶೇರುಪೇಟೆಗಳು ಇಂದಿನ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ. ಚೀನಾ ಮಾರುಕಟ್ಟೆಗೆ ಇಂದು ರಜೆ ಘೋಷಿಸಲಾಗಿದೆ.
 

Share this Story:

Follow Webdunia kannada