ಸೆನ್ಸೆಕ್ಸ್: 117 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರುಸೂಚ್ಯಂಕ

Webdunia
ಬುಧವಾರ, 20 ಜುಲೈ 2016 (11:55 IST)
ಏಷ್ಯಾ ಮಾರುಕಟ್ಟೆಗಳ ಮಿಶ್ರವಹಿವಾಟಿನ ಮಧ್ಯೆಯೂ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 117 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಹೆಲ್ತ್‌ಕೇರ್, ತೈಲ ಮತ್ತು ಅನಿಲ, ವಿದ್ಯುತ್, ರಿಯಲ್ಟಿ, ಎಫ್‌ಎಂಸಿಜಿ, ಪಿಎಸ್‌ಯು ಮತ್ತು ವಾಹನೋದ್ಯಮ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಶೇ.094 ರಷ್ಟು ಚೇತರಿಕೆ ಕಂಡಿವೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 40.96 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 117.09 ಪಾಯಿಂಟ್‌ಗಳ ಏರಿಕೆ ಕಂಡು 27,904.71 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 29.05 ಪಾಯಿಂಟ್‌ಗಳ ಏರಿಕೆ ಕಂಡು 8.557.60 ಅಂಕಗಳಿಗೆ ತಲುಪಿದೆ. 
 
ಬ್ಲೂ-ಚಿಪ್ ಶೇರುಗಳ ಖರೀದಿಗೆ ಹೂಡಿಕೆದಾರರು ತೋರುತ್ತಿರುವ ಆಸಕ್ತಿ ಮತ್ತು ಉತ್ತಮ ಮುಂಗಾರು ಮಳೆ ಹಿನ್ನೆಲೆಯಲ್ಲಿ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.82 ರಷ್ಟು ಚೇತರಿಕೆ ಕಂಡಿದ್ದರೆ, ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.72 ರಷ್ಟು ಕುಸಿತ ಕಂಡಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.17 ರಷ್ಟು ಇಳಿಕೆ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.14 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ-ಯುಎಸ್ ದಾಳಿ, ಸಾವನ್ನಪ್ಪಿದವರ ಸಂಖ್ಯೆ ಕೇಳಿದ್ರೆ ಶಾಕ್‌

ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 20 ಸಾವು

ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ₹700, ಆಟೋ ಚಾಲಕರ ಡಿಮ್ಯಾಂಡ್‌ಗೆ ಮಹಿಳೆ ಖಡಕ್ ಕೌಂಟರ್‌, Video

ಇರಾನ್ ಮೇಲೆ ಇಸ್ರೇಲ್, ಯುಎಸ್‌ ದಾಳಿ ಬೆನ್ನಲ್ಲೇ ಟೆಹ್ರಾನ್‌ನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ

ರಸ್ತೆಯಲ್ಲಿ ಚೆಲ್ಲಿದ ಮದ್ಯವನ್ನು ನೋಡಕ್ಕಾಗದೆ ಕುಡುಕನೊಬ್ಬ ಏನ್ ಮಾಡಿದ ನೋಡಿ, Video

ಮುಂದಿನ ಸುದ್ದಿ
Show comments